Untitled Document
Sign Up | Login    
Dynamic website and Portals
  
June 11, 2016

ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟ

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳನ್ನು, ಬಿಜೆಪಿ 2 ಸ್ಥಾನಗಳನ್ನು ಮತ್ತು ಜೆಡಿಎಸ್ 1 ಸ್ಥಾನವನ್ನು ಗೆದ್ದಿವೆ.

ಜನತಾದಳದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕೆ.ವಿ.ನಾರಾಯಣ ಸ್ವಾಮಿ 30 ಮತಗಳಿಸಿ ಗೆದ್ದಿದ್ದಾರೆ. ಕೇವಲ 5 ಮತಗಳನ್ನು ಪಡೆದ ಎಸ್.ಎಂ. ವೆಂಕಟಪತಿ ಪರಾಭವಗೊಂಡಿದ್ದಾರೆ.
ಒಟ್ಟು 7ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಅಲ್ಲಂ ವೀರಭದ್ರಪ್ಪ(33), ಆರ್ ಬಿ. ತಿಮ್ಮಾಪುರ್(33), ವೀಣಾ ಅಚ್ಚಯ್ಯ(31), ರಿಜ್ವಾನ್ ಅರ್ಷದ್(34), ಬಿಜೆಪಿಯ ವಿ.ಸೋಮಣ್ಣ(31ಮತ), ಲೇಹರ್ ಸಿಂಗ್ (27ಮತ) ಜಯ ಸಾಧಿಸಿದ್ದಾರೆ. ಜೆಡಿಎಸ್ ನ ಮೊದಲ ಅಭ್ಯರ್ಥಿ ಕೆ.ವಿ.ನಾರಾಯಣ ಸ್ವಾಮಿ(30ಮತ) ಗೆಲವು ಸಾಧಿಸಿದ್ದರೆ, 2ನೇ ಅಭ್ಯರ್ಥಿ ಡಾ. ವೆಂಕಟಪತಿ(5 ಮತ) ಸೋಲನ್ನನುಭವಿಸುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖಭಂಗ ಅನುಭವಿಸಿದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆ ನಡೆದ ಮತದಾನದಲ್ಲಿ ಓರ್ವ ನಾಮನಿರ್ದೇಶಿತ ಸೇರಿದಂತೆ ಎಲ್ಲಾ 225 ಶಾಸಕರು ಮತ ಚಲಾಯಿಸಿದ್ದರು.

ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾದ 224 ಮತ್ತು ಒಬ್ಬ ನಾಮನಿರ್ದೇಶಿತ ಸದಸ್ಯರು ಸೇರಿ 225 ಮಂದಿ ಮತದಾನ ಮಾಡಿದ್ದು, ಈ ಪೈಕಿ ಎರಡು ಮತಗಳು ತಿರಸ್ಕೃತಗೊಂಡಿದ್ದವು. ಉಳಿದಂತೆ 223 ಮತಗಳ ಪೈಕಿ ಕಾಂಗ್ರೆಸ್‌ನ ರಿಜ್ವಾನ್‌ ಹರ್ಷದ್‌ ಅತಿ ಹೆಚ್ಚು ಅಂದರೆ 34 ಮತ ಗಳಿಸಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಅಭ್ಯರ್ಥಿಗಳಾದ ಆರ್‌.ತಿಮ್ಮಾಪುರ್‌-33, ಅಲ್ಲಂ ವೀರಭದ್ರಪ್ಪ-32 ಮತ್ತು ವೀಣಾ ಅಚ್ಚಯ್ಯ-31 ಮತ ಗಳಿಸಿದ್ದರೆ, ಬಿಜೆಪಿಯ ವಿ.ಸೋಮಣ್ಣ-31 ಹಾಗೂ ಜೆಡಿಎಸ್‌ನ ಕೆ.ವಿ.ನಾರಾಯಣಸ್ವಾಮಿ-30 ಮತಗಳನ್ನು ಪಡೆದು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದರು.

ಮೊದಲ ಮತಗಳ ಎಣಿಕೆ ಮುಗಿದಾಗ ಬಿಜೆಪಿಯ ಲೆಹರ್‌ಸಿಂಗ್‌ 27 ಮತ ಪಡೆದಿದ್ದರೆ, ಜೆಡಿಎಸ್‌ನ ಡಾ.ಎಸ್‌.ಎಂ.ವೆಂಕಟಪತಿ ಐದು ಮತ ಗಳಿಸಿದ್ದರು. ಆದರೆ, ಗೆಲ್ಲಲು 28 ಮತಗಳ ಅಗತ್ಯವಿದ್ದುದರಿಂದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಯಿತು. ಅದರಲ್ಲಿ 25 ಮತ ಗಳಿಸಿದ ಲೆಹರ್‌ ಸಿಂಗ್‌ ಗೆಲುವು ಸಾಧಿಸಿದರು. ವೆಂಕಟಪತಿ ಸೋಲು ಅನುಭವಿಸಿದರು.

ಒಟ್ಟು 225 ಮತಗಳಲ್ಲಿ 223 ಮತಗಳು ಮಾತ್ರ ಸಿಂಧುವಾಗಿತ್ತು. ಈ ಹಿನ್ನೆಲೆಯಲ್ಲಿ ಲೆಕ್ಕಾಚಾರ ಹಾಕಿದಾಗ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿತ್ತು. ಎಂಟು ಅಭ್ಯರ್ಥಿಗಳ ಪೈಕಿ ಆರು ಮಂದಿ 28ಕ್ಕಿಂತ ಹೆಚ್ಚು ಮತ ಗಳಿಸಿದ್ದರೆ, ಬಿಜೆಪಿಯ ಲೆಹರ್‌ ಸಿಂಗ್‌ 27 ಮತ ಗಳಿಸಿ ಗೆಲುವಿಗೆ ಒಂದು ಮತದ ಕೊರತೆ ಎದುರಿಸಿದರು. ಐದು ಮತ ಗಳಿಸಿದ ಜೆಡಿಎಸ್‌ನ ವೆಂಕಟಪತಿ ಅವರಿಗೆ 23 ಮತ ಕೊರತೆ ಇತ್ತು.

ಹೀಗಾಗಿ ಎರಡನೇ ಮತ ಎಣಿಸಿದಾಗ ಲೆಹರ್‌ ಸಿಂಗ್‌ ಅವರಿಗೆ 25 ಮತ ಬಂದಿತ್ತು. ಪ್ರತಿ ಮೊದಲ ಪ್ರಾಶಸ್ತ್ಯ ಮತದ ಮೌಲ್ಯ 100 ಆಗಿದ್ದರೆ, ಎರಡನೇ ಪ್ರಾಶಸ್ತ್ಯದ ಮತಕ್ಕೆ 12.08ರ ಮೌಲ್ಯ ನಿಗದಪಡಿಸಲಾಗಿತ್ತು. ಅದರಂತೆ ಲೆಹರ್‌ಸಿಂಗ್‌ಗೆ ಬಂದಿದ್ದ ಎರಡನೇ ಪ್ರಾಶಸ್ತ್ಯದ ಮತದ ಮೌಲ್ಯ ಲೆಕ್ಕ ಹಾಕಿದಾಗ ಅದು 302 ಆಗಿತ್ತು. ಅದನ್ನು ಮೊದಲ ಪ್ರಾಶಸ್ತ್ಯದ ಮತದ ಮೌಲ್ಯದಿಂದ ವಿಭಾಗಿಸಿದಾಗ ಮೂರು ಮತ ಬಂದಿದ್ದು, ಅದರೊಂದಿಗೆ ಲೆಹರ್‌ಸಿಂಗ್‌ ಪಡೆದ ಒಟ್ಟು ಮತ 30 ಆಗಿದ್ದರಿಂದ ಲೆಹರ್‌ಸಿಂಗ್‌ ಅವರು ಏಳನೇ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited