ಹೆರಾತ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಫ್ಘಾನಿಸ್ತಾನ ಸರ್ಕಾರ, ತನ್ನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ ನೀಡಿ ಗೌರವಿಸಿದೆ.
ಆಪ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ಮೋದಿ,ಭಾರತ-ಆಫ್ಘಾನಿಸ್ತಾನ ಸ್ನೇಹದ ಸಂಕೇತವಾದ ಸಲ್ಮಾ ಅಣೆಕಟ್ಟು ಉದ್ಘಾಟನೆ ಮಾಡಿದರು. ಈ ವೇಳೆ ಮೋದಿ ಅವರಿಗೆ ಆಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಭಾರತದ ಅಜ್ಮೇರ್ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ಅವರು ಹುಟ್ಟಿದ್ದು ಆಫ್ಘಾನಿಸ್ತಾನದ ಇದೇ ಚಿಸ್ತಿ ಪ್ರದೇಶದಲ್ಲಿ. ಭಾರತಕ್ಕೆ ಆಗಮಿಸಿದ ಸೂಫಿ ಸಂತರ ಪೈಕಿ ಖ್ವಾಜಾ ಮೊಹಿನುದ್ದೀನ್ ಅವರು ಮೊದಲಿಗರು ಎಂದು ಬಣ್ಣಿಸಿದರು.
ಇದೆ ವೇಳೆ ರಂಜಾನ್ ಮಾಸ ಇದೇ 7ರಿಂದ ಆರಂಭವಾಗಲಿದೆ. ವಿಶ್ವದೆಲ್ಲೆಡೆ ಇರುವ ಮುಸ್ಲಿಮರಿಗೆ ಮೋದಿ ಪವಿತ್ರ ರಂಜಾನ್ ಮಾಸಾಚರಣೆಯ ಶುಭಾಶಯ ಕೋರಿದರು.