ನಾಗ್ಪುರ : ದೇಶದ ಅತಿ ದೊಡ್ಡ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಅಧಿಕಾರಿಗಳು ಹಾಗೂ 18 ಮಂದಿ ಯೋಧರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ
ಮಹಾರಾಷ್ಟ್ರದ ಪುಲಗಾಂವ್ ಸಮೀಪದ ವಾರ್ಧಾದಲ್ಲಿರುವ ಕೇಂದ್ರ ಶಸ್ತ್ರಾಸ್ತ್ರ ಡಿಪೋ(ಸಿಎಡಿ)ದಲ್ಲಿ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.ಅಗ್ನಿ ದುರಂತದಲ್ಲಿ ಇಬ್ಬರು ಅಧಿಕಾರಿಗಳು, 18 ಮಂದಿ ಸೇನಾ ಭದ್ರತಾ ಯೋಧರು ಸಾವನ್ನಪ್ಪಿರುವುದಾಗಿ ಮಿಲಿಟರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನೆಯಲ್ಲಿ 17 ಮಂದಿ ಡಿಎಸ್ ಸಿ ಯೋಧರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೇನಾ ಶಸ್ತ್ರಾಗಾರದೊಳಗೆ ಅಗ್ನಿ ದುರಂತ ಸಂಭವಿಸಲು ಕಾರಣ ಈವರೆಗೂ ತಿಳಿದು ಬಂದಿಲ್ಲ. ಕೆಲ ಮಾಹಿತಿ ಪ್ರಕಾರ ಶಸ್ತ್ರಾಗಾರದ ಒಂದು ಶೆಡ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.