Untitled Document
Sign Up | Login    
Dynamic website and Portals
  
May 25, 2016

ಸಂಜೋತಾ ಎಕ್ಸ್‌ಪ್ರೆಸ್‌ ಪ್ರಕರಣ: ಅಮೆರಿಕ ಗುಪ್ತಚರ ವರದಿ ಕೋರ್ಟ್ ಗೆ ಸಲ್ಲಿಸಲು ಮುಂದಾದ ಎನ್‌ಐಎ

ನವದೆಹಲಿ : ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣದಲ್ಲಿ ಪಾಕಿಸ್ಥಾನದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಕೈವಾಡವಿತ್ತು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಮೆರಿಕ ಗುಪ್ತಚರ ವರದಿಯನ್ನು ಉಲ್ಲೇಖೀಸಲಿದೆ ಎಂದು ತಿಳಿದುಬಂದಿದೆ.

2007ರ ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟದಲ್ಲಿ ಪಾಕ್‌ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಸಂಚಾಲಕ ಆರಿಫ್ ಖಸ್ಮಾನಿಯ ಕೈವಾಡ ಇತ್ತೆಂಬುದನ್ನು ಅಮೆರಿಕದ ಗುಪ್ತಚರ ದಳದ ವರದಿಗಳು ಬಹಿರಂಗಪಡಿಸಿದ್ದವು. ಈ ವರದಿಯನ್ನು ಸಾಕ್ಷ್ಯವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳ ಈ ವರದಿ ಪ್ರತಿಯನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚಕುಲ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತಿದೆ.

ಪ್ರಕರಣದಲ್ಲಿ ಅಂದಿನ ಯುಪಿಎ ಸರಕಾರ, ಸ್ವಾಮಿ ಆಸೀಮಾನಂದ ಮತ್ತು ಇತರ ಹುನ್ನಾರ ನಡೆಸಿತ್ತು, ಅಲ್ಲದೇ ಈ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡವಿತ್ತು. ಆದರೂ ಅದು ತನಿಖೆ ಮಾಡಿರಲಿಲ್ಲ ಎಂದು ಕೆಲವು ಹಿಂದೂ ಸಂಘಟನೆಗಳು ಇತ್ತೀಚೆಗೆ ಆರೋಪ ಮಾಡಿದ್ದವು.

ಆರಿಫ್ ಖಸ್ಮಾನಿ ಕುರಿತ ವಿವರಗಳನ್ನು ನೀಡುವಂತೆ 2010ರಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ ಅಮೆರಿಕ ಗುಪ್ತಚರ ಸಂಸ್ಥೆಗೆ ಕೇಳಿತ್ತು. ಆದರೆ ಅಂದು ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಅಮೆರಿಕ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿರುವ ವರದಿಯನ್ನು ಪಂಚಕುಲ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ರಾಷ್ಟ್ರೀಯ ತನಿಖಾದಳ ಮುಂದಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited