ಶ್ರೀಹರಿಕೋಟಾ : ಇದೇ ಮೊದಲ ಭಾರಿಗೆ ಸ್ವದೇಶಿ ನಿರ್ವಿುತ ಆರ್ಎಲ್ ವಿ-ಟಿಡಿ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಅಭಿವೃದ್ಧಿಪಡಿಸಿರುವ ಸುಮಾರು 1.7 ಟನ್ ತೂಕವಿರುವ ಈ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ (ಆರ್ಎಲ್ ವಿ-ಟಿಡಿ)ಯನ್ನು ಉಡಾವಣೆ ಮಾಡಲಾಯಿತು.
ಮಾನವರಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಸಹಕಾರಿ ಎಂದು ವಿಜ್ಞಾನಿಗಳು ವಿವರಿಸಿದ್ದು, ಇದು ಅಮೆರಿಕದ ನೌಕೆಗಿಂತ ಆರು ಪಟ್ಟು ಚಿಕ್ಕದಾಗಿದೆ.
ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿ ಇದರ ಪೂರ್ವಭಾವಿ ಪರೀಕ್ಷೆ ನಡೆಸಿ, ಅದರ ಕಾರ್ಯಕ್ಷಮತೆ ಮತ್ತು ವಿಮಾನ ನಿಯಂತ್ರಣ ಪರೀಕ್ಷೆಯನ್ನು ನಡೆಸಲಾಗಿದೆ.