Untitled Document
Sign Up | Login    
Dynamic website and Portals
  
May 14, 2016

ಮಗು ಹುಟ್ಟಿದ ಕೂಡಲೇ ಆಧಾರ್‌ ಕಾರ್ಡ್

ನವದೆಹಲಿ : ಮಗು ಹುಟ್ಟಿದ ಕೂಡಲೇ ಆಧಾರ್‌ಗೆ ಸೇರ್ಪಡೆಗೊಳಿಸುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಸರಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲುದ್ದೇಶಿಸಲಾಗಿದೆ ಎನ್ನಲಾಗಿದೆ.

ಮಗು ಹುಟ್ಟಿದ ಕೂಡಲೇ 12 ಅಂಕಿಯ ಆಧಾರ್‌ ನಂಬರ್‌ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿಧರಿಸಿದೆ. ಹರಿಯಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಮಗು ಜನಿಸಿದ ಕೂಡಲೇ ಆಧಾರ್‌ ನಂಬರ್‌ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಫೆಬ್ರವರಿಯಿಂದ ಜನವರಿ ನಡುವೆ 82,768 ನವಜಾತ ಶಿಶುಗಳನ್ನು ಆಧಾರ್‌ಗೆ ಸೇರ್ಪಡೆಗೊಳಿಸಲಾಗಿದೆ. ಇಲ್ಲಿ ಈ ಯೋಜನೆ ಯಶಸ್ವಿಯಾಗಿರುವುದರಿಂದ ದೇಶವ್ಯಾಪಿಯಾಗಿ ಜಾರಿಗೆ ಬರಲಿದೆ.

ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಟ್ಯಾಬ್ಲೆಟ್‌ ಒದಗಿಸಲಾಗುವುದು. ಮಗು ಹುಟ್ಟಿದ ಅರ್ಧ ತಾಸಿನೊಳಗೆ ಈ ಟ್ಯಾಬ್ಲೆಟ್‌ ಮೂಲಕ ಮಗು ಆಧಾರ್‌ಗೆ ಸೇರ್ಪಡೆಯಾಗಲಿದೆ. ಮಗುವಿನ ಫೋಟೋ ಮತ್ತು ತಂದೆ ಅಥವಾ ತಾಯಿಯ ಬಯೋಮೆಟ್ರಿಕ್‌ ವಿವರಗಳ ಆಧಾರದಲ್ಲಿ ಮಗುವಿಗೆ ಆಧಾರ್‌ ನಂಬರ್‌ ಸಿಗಲಿದೆ. ಸಮಗ್ರ ಶಿಶು ಅಭಿವೃದ್ಧಿ ಸ್ಕೀಂನ ಸೌಲಭ್ಯಗಳು ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಇರುವ ಇತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಈ ವ್ಯವಸ್ಥೆ ನೆರವಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited