ವಾಷಿಂಗ್ಟನ್ : ಜೂನ್ ತಿಂಗಳಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂ.8ರಂದು ಅಲ್ಲಿನ ಸಂಸತ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಕುರಿತು ಅಮೆರಿಕದ ಸಂಸತ್ ನ ಸ್ಪೀಕರ್ ಪಾಲ್ ರ್ಯಾನ್ ವಾಷಿಂಗ್ಟನ್ ನಲ್ಲಿ ಮಾಹಿತಿ ನೀಡಿದ್ದಾರೆ. ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯ ಅನುಭವಗಳು ಅಮೆರಿಕದ ಸಂಸದರಿಗೆ ಸ್ಪೂರ್ತಿ ತುಂಬಲಿದೆ ಎಂದು ರ್ಯಾನ್ ಹೇಳಿದ್ದಾರೆ.
2005ರ ಜೂನ್ ನಂತರ ಯಾವ ದೇಶದ ಪ್ರಧಾನಿಗೂ ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಅಮೆರಿಕ ಹಾಗೂ ಭಾರತ ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜೂನ್ 7ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.