Untitled Document
Sign Up | Login    
Dynamic website and Portals
  
April 29, 2016

ಅಣ್ವಸ್ತ್ರ ಸಜ್ಜಿತ, ಅಸ್ಥಿರ ಪಾಕ್ ಸಮಸ್ಯೆ ನಿವಾರಿಸಲು ನಾವು ಭಾರತದ ನೆರವು ಪಡೆಯುವ ಅಗತ್ಯವಿದೆ: ಡೋನಲ್ಡ್‌ ಟ್ರಂಪ್‌

ವಾಷಿಂಗ್ಟನ್ : ರಾಜಕೀಯವಾಗಿ ಅರೆ ಅಸ್ಥಿರ ಹಾಗೂ ಅಣ್ವಸ್ತ್ರ ದೇಶ ಎನಿಸಿರುವ ಪಾಕಿಸ್ತಾನದ ಸಮಸ್ಯೆಯನ್ನು ನಿಭಾಯಿಸಲು ನಾವು ಭಾರತದ ನೆರವನ್ನು ಪಡೆಯಬಹುದಾಗಿದೆ ಎಂದು ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಿ ರಿಪಬ್ಲಿಕನ್‌ ಸ್ಪರ್ಧಾಕಣದಲ್ಲಿರುವ ಡೋನಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಇದೆ.ಅಲ್ಲಿನ ರಾಜಕಾರಣಿಗಳಲ್ಲಿ ಗೊಂದಲವಿದೆ. 9/11ರ ಘಟನೆಯ ಬಳಿಕ ನಾವು ಆ ದೇಶಕ್ಕೆ ಈ ತನಕ 25 ಬಿಲಿಯ ಡಾಲರ್‌ ನೆರವನ್ನು ಕೊಟ್ಟಿದ್ದೇವೆ. ಅಲ್ಲಿನ ಮಿಲಿಟರಿ, ಉಗ್ರರನ್ನು ಪೋಷಣೆ ಮಾಡುತ್ತಿದೆ. ಅವರು ಭಾರತವನ್ನು ಗುರಿ ಇರಿಸಿ ಆಗಾಗ ದಾಳಿ ಮಾಡುತ್ತಿರುತ್ತಾರೆ. ಅಣ್ವಸ್ತ್ರ ಸಜ್ಜಿತ ದೇಶವಾಗಿ ಪಾಕಿಸ್ಥಾನ ಅಪಾಯಕಾರಿಯಾಗಿದೆ. ಆ ಸಮಸ್ಯೆಯನ್ನು ನಾವು ನಿವಾರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪಾಕ್ ನಲ್ಲಿ ಅಸ್ಥಿರತೆ ಉಂಟಾದರೆ ಅದು ವಿನಾಶಕಾರಿಮಟ್ಟ ತಲುಪುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ನಿಭಾಯಿಸಲು ನಾವು ಭಾರತದ ನೆರವನ್ನು ಪಡೆಯಬಹುದಾಗಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಇದೇ ವೇಳೆ 2016-17ರ ಸಾಲಿಗೆ ಪಾಕಿಸ್ಥಾನ ಉಗ್ರ ನಿಗ್ರಹ ಹೋರಾಟದ ಉದ್ದೇಶಕ್ಕೆಂದು ಕೊಡಲು 742.2 ಮಿಲಿಯ ಡಾಲರ್‌ಗಳನ್ನು ಅಮೆರಿಕದ ವಿದೇಶ ಇಲಾಖೆಯ ಸಂಸತ್ತಿನ ಮುಂದೆ ಬೇಡಿಕೆ ಇಟ್ಟಿದೆ. ಇದರಲ್ಲಿ 472.4 ಮಿಲಿಯ ಡಾಲರ್‌ ಪೌರ ನೆರವು ಮತ್ತು 269.8 ಮಿಲಿಯ ಡಾಲರ್‌ ಭದ್ರತಾ ನೆರವು ಸೇರಿದೆ ಎಂದು ಡೋನಲ್ಡ್‌ ಟ್ರಂಪ್‌ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited