ನವದೆಹಲಿ : ನವದೆಹಲಿಯ ಮಂಡಿಹೌಸ್ ಪ್ರದೇಶದಲ್ಲಿರುವ ಎಫ್.ಐ.ಸಿ.ಸಿ.ಐ ಕಟ್ಟಡದಲ್ಲಿ ಮುಂಜಾನೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಸಂಪೂರ್ಣವಾಗಿ ಭಸ್ಮವಾಗಿದೆ.
ಇದೇ ವೇಳೆ ಬೆಂಕಿ ನಂದಿಸಲು ಆಗಮಿಸಿದ ಇಬ್ಬರು ಅಗ್ನಿಶಾಮಕದಳದ 6 ಸಿಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಆ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ 40 ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿಯನ್ನು ತಹ ಬಂದಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ನಸುಕಿನಜಾವ 1.30 ರ ವೇಳೆಗೆ ಕಟ್ಟಡದ ಕೆಳಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ 6 ಮಹಡಿಯ ಕಟ್ಟಡದ ತುಂಬ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ಇದುವರೆಗೆ ತಿಳಿದು ಬಂದಿಲ್ಲ.
ಸ್ಥಲಕ್ಕೆ ಭೇಟಿ ನೀಡಿದ ಕೇಂದ್ರ ಪರಿಸರ ಖತೆ ಸಚಿವ ಪ್ರಕಾಶ್ ಜಾವಡೇಕರ್, ಇದೊಂದು ದುರಂತ, ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಒಂದು ರಾಷ್ಟ್ರೀಯ ನಿಧಿ. ನಷ್ಟವನ್ನು ರೂಪಾಯಿಗಳಲ್ಲಿ ಎಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಮ್ಯೂಸಿಯಂ 1978 ರ ಜೂನ್ 5 ರಿಂದ ಅಸ್ಥಿತ್ವದಲ್ಲಿದೆ.