Untitled Document
Sign Up | Login    
Dynamic website and Portals
  
April 14, 2016

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು ವಿಶೇಷ ಸ್ಪರ್ಧೆ - 2016 ಫಲಿತಾಂಶ ಪ್ರಕಟ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು ವಿಶೇಷ ಸ್ಪರ್ಧೆ - 2016 ಫಲಿತಾಂಶ ಪ್ರಕಟ

Mangalore : ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ’ಸೌರಮಾನ ಯುಗಾದಿ’ ಅಥವಾ ’ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ’ವಿಷು ವಿಶೇಷ ಸ್ಪರ್ಧೆ - 2016’ರ ಫಲಿತಾಂಶ ಪ್ರಕಟಗೊಂಡಿದೆ.

ಪ್ರಬಂಧ, ಕಥೆ, ಕವಿತೆ, ನಗೆ ಬರಹ ಮತ್ತು ಕಾರ್ಟೂನು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮೇ 14, 2016 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಡಾ| ಹರಿಕೃಷ್ಣ ಭರಣ್ಯ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾನ್ ಜಗದೀಶ ಶರ್ಮಾ ಸಂಪ, ನಾರಾಯಣ ಬಾಳಿಲ, ರಾಘವಯ್ಯ ಮುಳಿಯ, ರಾಘವೇಂದ್ರ ಹೆಗಡೆ ಕಡ್ನಮನೆ, ಮಧುಕೇಶ ದೊಡ್ಡೇರಿ, ಪುಂಡಿಕಾಯಿ ನಾರಾಯಣ ಭಟ್, ಭಾಗ್ಯಲಕ್ಷ್ಮಿ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಫಲಿತಾಂಶದ ವಿವರ:
1. ಪ್ರಬಂಧ: ಪ್ರಥಮ: ರೇಖಾ ಶ್ರೀನಿವಾಸ್ ಮುನಿಯೂರು, ದ್ವಿತೀಯ: ಶ್ರೀಲತಾ ಹರೀಶ್, ಕುಂಬಳೆ

2. ಕಥೆ: ಪ್ರಥಮ: ಸುರೇಶ್ ಬೆಳ್ತಂಗಡಿ, ದ್ವಿತೀಯ: ವಿಜಯಲಕ್ಷ್ಮಿ ಕಟ್ಟದಮೂಲೆ

3. ಕವನ: ಪ್ರಥಮ: ಸರಸ ಬಿ. ಕೃಷ್ಣ ಕಮ್ಮರಡಿ, ದ್ವಿತೀಯ: ಎಸ್.ಕೆ.ಗೋಪಾಲಕೃಷ್ಣ ಭಟ್

4. ನಗೆ ಬರಹ: ಪ್ರಥಮ: ಪೂರ್ಣಿಮಾ ಸಣ್ಣಕೇರಿ, ದ್ವಿತೀಯ: ಶೀಲಾಲಕ್ಷ್ಮಿ ವರ್ಮುಡಿ

5. ಕಾರ್ಟೂನು: ಪ್ರಥಮ: ವೆಂಕಟ್ ಕೋಟೂರ್, ದ್ವಿತೀಯ: ಶ್ಯಾಮಸುಂದರ್ ನೆತ್ರಕೆರೆ

ವಿಶೇಷ ಬಹುಮಾನ : ಸವಿತಾ ಎಸ್. ಭಟ್ ಅಡ್ವಾಯಿ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

ಆಧುನಿಕ ಅಂತರ್ಜಾಲದ ಮೂಲಕ ಪ್ರಕಟಗೊಂಡು, ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಗೆ ಬೃಹದ್ವೇದಿಕೆಯಾಗಿ ರೂಪುಗೊಂಡ ಸಾಹಿತ್ಯ ಬಳಗ ಒಪ್ಪಣ್ಣ-ನೆರೆಕರೆ. ಎಲ್ಲ ಆಸಕ್ತರಿಗೂ ಮುಕ್ತ ಪ್ರವೇಶವನ್ನಿತ್ತು ಬರೆಯಲು-ಬೆರೆಯಲು ಪ್ರೇರೇಪಿಸುತ್ತಾ, ಇದೀಗ ಏಳುನೂರಕ್ಕೂ ಹೆಚ್ಚು ಲೇಖಕರ - ಐದು ಸಾವಿರಕ್ಕೂ ಅಧಿಕ ಲೇಖನಗಳನ್ನು ಹೊಂದಿದ್ದು, ದಿನೇದಿನೇ ಬೆಳೆಯುತ್ತಿದೆ.

ಅಕ್ಷರಯಜ್ಞದ ಮೂಲಕ ಸಾಹಿತ್ಯ ಸೇವೆಗೈಯುತ್ತಿರುವ ಈ ಬಳಗವನ್ನು ನಮ್ಮ ಹಳ್ಳಿಜೀವನವನ್ನು ನೆನಪಿಸುವಂತೆ ಬೈಲು ಎಂದು ಕರೆಯುವುದು ರೂಢಿ. ಈ ಬೈಲು ಸಮಾಜವನ್ನು ತಲುಪುವ ಉದ್ದೇಶದಿಂದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆ ಮೂಲಕ ಸಾಹಿತ್ಯ ಪ್ರಕಟಣೆಗಳು, ಲಲಿತಕಲೆಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಧನಸಹಾಯ, ಸನಾತನ ಜೀವಿಕೆಯ ಪ್ರಸಾರ, ಪ್ರಚಾರ-ಇತ್ಯಾದಿ ಕೈಂಕರ್ಯಗಳನ್ನು ಮಾಡುತ್ತಾ ಬಂದಿದೆ.

ಪ್ರತಿಷ್ಠಾನದ ಧ್ಯೇಯೋದ್ದೇಶಗಳಲ್ಲೊಂದಾದ ಲಲಿತಕಲೆ ಸಂಚಾಲಕತ್ವದಲ್ಲಿ 2013ರಲ್ಲಿ ಅಷ್ಟಾವಧಾನ ಕಾರ್ಯಕ್ರಮ, 2014ರಲ್ಲಿ ಕಾವ್ಯ-ಗಾನ-ಯಾನ ಎಂಬ ವಿನೂತನ ಕಾರ್ಯಕ್ರಮ ಮತ್ತು 2015ರಲ್ಲಿ ಯಕ್ಷಗಾನವನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಭೂತಪೂರ್ವವಾಗಿ ಆಯೋಜಿಸಿತ್ತು. ಪ್ರತಿಷ್ಠಾನವು ಹವ್ಯಕ ಭಾಷಾ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿದ್ವಾ೦ಸರಿಗೆ ದಿ.ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿಯನ್ನು 2015ರಿ೦ದ ಆಯೋಜಿಸುತ್ತಾ ಬ೦ದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited