Untitled Document
Sign Up | Login    
Dynamic website and Portals
  
April 6, 2016

ಭಾರತ ಪ್ರವೇಶಿಸಿದ ಪಾಕ್ ನ ಮೂವರು ಉಗ್ರರು: ಕಟ್ಟೆಚ್ಚರ ಘೋಷಣೆ

ಚಂಡೀಗಢ : ಮೂವರು ಪಾಕ್‌ ಉಗ್ರರು ಓರ್ವ ಸ್ಥಳೀಯ ವ್ಯಕ್ತಿಯೊಂದಿಗೆ ಬೂದು ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿ ಶಸ್ತ್ರಸಜ್ಜಿತರಾಗಿ ಸಂಚರಿಸುತ್ತಿದ್ದು ಇವರು ದೆಹಲಿ, ಮುಂಬಯಿ ಅಥವಾ ಗೋವಾದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಪಂಜಾಬ್‌ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಈ ಶಂಕಿತ ಪಾಕ್‌ ಉಗ್ರರಲ್ಲಿ ಆತ್ಮಾಹುತಿ ಬಾಂಬ್‌ ದಾಳಿಯ ಬೆಲ್ಟ್‌ಗಳೂ ಇರುವ ಸಾಧ್ಯತೆಗಳಿವೆ ಎಂದು ದೆಹಲಿ ಪೊಲೀಸರ ವಿಶೇಷ ದಳ ನೀಡಿರುವ ಮಾಹಿತಿಯನ್ನು ಆಧರಿಸಿ ಪಂಜಾಬ್‌ ಪೊಲೀಸರರು ಹೇಳಿದ್ದಾರೆ. ಇಂದು ರಾತ್ರಿ ವೇಳೆಗೆ ಈ ಶಂಕಿತ ಪಾಕ್‌ ಉಗ್ರರು ಜಮ್ಮು-ಕಾಶ್ಮೀರದಲ್ಲಿನ ಬನಿಹಾಲ್‌ ಸುರಂಗವನ್ನು ಹಾದುಹೋಗಲಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ವಾಹಿನಿ ವರದಿಯ ಪ್ರಕಾರ ಶಂಕಿತ ಪಾಕ್‌ ಉಗ್ರರು ಸಂಚರಿಸುತ್ತಿರುವ ಕಾರು ಜೆಕೆ-01 ಎಬಿ02654 ಎಂಬ ನಂಬರ್‌ ಪ್ಲೇಟ್‌ ಹೊಂದಿದೆ. ಪಂಜಾಬ್‌ ಪೊಲೀಸರ ಈ ಮುನ್ನೆಚ್ಚರಿಕೆಯನ್ನು ಗಂಭಿರವಾಗಿ ತೆಗೆದುಕೊಳ್ಳಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.

ಜನವರಿಯ ಆರಂಭದಲ್ಲಿ ಪಾಕ್‌ ಉಗ್ರರು ಪಂಜಾಬ್‌ ಗಡಿ ಮೂಲಕ ಭಾರತದೊಳಗೆ ನುಸುಳಿ ಬಂದು ಪಠಾಣ್‌ ಕೋಟ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದರು. ಅಂದು ಪಾಕ್‌ ಉಗ್ರರು ಎರಡು ಕಾರುಗಳನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದರು. ಒಂದನ್ನೂ ಪೊಲೀಸ್‌ ಅಧಿಕಾರಿಯಿಂದಲೂ ಇನ್ನೊಂದನ್ನು ಟ್ಯಾಕ್ಸಿ ಡ್ರೈವರ್‌ನಿಂದಲೂ ಅವರು ಕಸಿದುಕೊಂಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited