Untitled Document
Sign Up | Login    
Dynamic website and Portals
  
April 5, 2016

ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ಗೆ ಇಂದು ಚಾಲನೆ

ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ಗೆ ಇಂದು ಚಾಲನೆ

ನವದೆಹಲಿ : ಭಾರತದ ಮೊದಲ ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಂಗಳವಾರ ಚಾಲನೆ ದೊರೆಯಲಿದೆ.

ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲು ದೆಹಲಿ ಮತ್ತು ಆಗ್ರಾ ನಡುವಿನ 210 ಕಿ.ಮೀ ದೂರವನ್ನು ಅಂದಾಜು 100 ನಿಮಿಷಗಳಲ್ಲಿ ಕ್ರಮಿಸಲಿದೆ. ರೈಲ್ವೆ ಸಚಿವ ಸುರೇಶ್‌ ಪ್ರಭು, ರಿಮೋಟ್‌ ಒತ್ತುವ ಮೂಲಕ ಮಂಗಳವಾರ ಈ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

ಪ್ರತಿ ದಿನ ದೆಹಲಿಯ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.10ಕ್ಕೆ ಹೊರಡಲಿರುವ ರೈಲು, 9.50ಕ್ಕೆ ಆಗ್ರಾ ತಲುಪಿದೆ. ಶುಕ್ರವಾರ ಹೊರತುಪಡಿಸಿ ಉಳಿದ 6 ದಿನ ರೈಲಿನ ಸಂಚಾರ ಇರುತ್ತದೆ. ಶುಕ್ರವಾರ ಆಗ್ರಾದಲ್ಲಿ ತಾಜ್‌ಮಹಲ್‌ ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಿರುವ ಕಾರಣ, ಅಂದು ರೈಲಿನ ಸೇವೆ ಇರುವುದಿಲ್ಲ.

ವಿಮಾನದಲ್ಲಿ ಗಗನಸಖಿಯರು ಇರುವಂತೆ ಈ ರೈಲಿನಲ್ಲಿ ರೈಲು ಸಖೀಯರು ಇರಲಿದ್ದಾರೆ. ಉಚಿತ ವೈಫೈ ಸೌಲಭ್ಯ ಇರಲಿದೆ. ಶಾಕಾಹಾರಿ ಮತ್ತು ಸಸ್ಯಾಹಾರಿ ಊಟ, ಸ್ನ್ಯಾಕ್ಸ್‌ ಲಭ್ಯ. ಪ್ರತಿ ಬೋಗಿಯಲ್ಲೂ ಕಸ ಹಾಕಲು ವಿಶೇಷ ಡಬ್ಬಿ ಅಳವಡಿಕೆ, ಸ್ವಯಂಚಾಲಿತ ಬಾಗಿಲು, ವಿಶೇಷವಾಗಿ ವಿನ್ಯಾಸಗೊಳಸಿರುವ 12 ಎಸಿ ಬೋಗಿಗಳು ಈ ರೈಲಿನ ವಿಶೇಷವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Infrastructure

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
 • ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
 • ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಷರತ್ತುಬದ್ಧ ಅನುಮತಿಯನ್ನು ನೀಡಿದೆ.
 • ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಇಳಿಕೆ
 • ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited