ನವದೆಹಲಿ : ದೇಶದ ಹಲವು ಭಾಗಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಮಾರ್ಚ್ 24 ರಿಂದ ಸಾಲಾಗಿ ನಾಲ್ಕು ದಿನಗಳು ರಜೆ ಇದೆ. ಈ ರೀತಿ ನಿರಂತರ ರಜೆಯಿಂದ ಗ್ರಾಹಕರಿಗೆ ತೊಂದರೆ ಆಗುವುದು ಖಂಡಿತ.
ಬ್ಯಾಂಕ್ ಗಳಿಗೆ ರಜೆ ಈ ಕೆಳಗಿನಂತಿದೆ.
ಮಾರ್ಚ್ 24 ಹೋಳಿ ಹಬ್ಬದ ರಜೆ
ಮಾರ್ಚ್ 25 ಗುಡ್ ಫ್ರೈಡೆ ರಜೆ
ಮಾರ್ಚ್ 26 ನಾಲ್ಕನೇ ಶನಿವಾರದ ರಜೆ
ಮಾರ್ಚ್ 27 ಭಾನುವಾರದ ರಜೆ
ಬ್ಯಾಂಕ್ ಗಳಿಗೆ ನಿರಂತರ ರಜೆ ಇರುವುದರಿಂದ ಎಟಿಎಂ ಕೂಡ ಬರಿದಾಗಿ ಗ್ರಾಹಕ ಹಣಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಬಹುದು.