Untitled Document
Sign Up | Login    
Dynamic website and Portals
  
March 11, 2016

ರಾಜ್ಯಸಭೆಯಲ್ಲಿ ರಿಯಲ್ ಎಸ್ಟೇಟ್ ವಿಧೇಯಕ ಅಂಗೀಕಾರ

ನವದೆಹಲಿ : ಮಹತ್ವದ ರಿಯಲ್ ಎಸ್ಟೇಟ್ ವಿಧೇಯಕಕ್ಕೆ ಗುರುವಾರ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಕಿದೆ. ಆಸ್ತಿ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಮತ್ತು ಗ್ರಾಹಕ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುವ ಈ ರಿಯಲ್ ಎಸ್ಟೇಟ್ ವಿಧೇಯಕ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಕ್ಕೆ ಬರಲಿದೆ.

ರಾಜ್ಯಸಭೆಯಲ್ಲಿ ಅನುಮೋದನೆಗೊಂಡ ಈ ಮಸೂದೆಯ ಪ್ರಕಾರ, ಮನೆ/ಫ್ಲ್ಯಾಟ್‌ ನಿರ್ಮಾಣಕ್ಕೆಂದು ಗ್ರಾಹಕರಿಂದ ಸಂಗ್ರಹಿಸುವ ಹಣದ ಪೈಕಿ ಶೇ.70ರಷ್ಟು ಮೊತ್ತವನ್ನು ಬಿಲ್ಡರ್‌ಗಳು ನಿರ್ದಿಷ್ಟ ಬ್ಯಾಂಕ್‌ ಖಾತೆಯಲ್ಲಿಡಬೇಕು. ಎಲ್ಲ ರಾಜ್ಯಗಳೂ ರಾಜ್ಯ ಮಟ್ಟದಲ್ಲಿ ರಿಯಲ್‌ ಎಸ್ಟೇಟ್‌ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು.

ಯಾವುದೇ ಯೋಜನೆ 500 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣ ವಾಗುವ ಅಥವಾ 8 ಅಪಾರ್ಟ್ ಮೆಂಟ್ ಕ್ಕೂ ಹೆಚ್ಚಿದ್ದರೆ ಈ ವಿಧೇಯಕದ ಅಡಿಯಲ್ಲಿ ಬರುತ್ತದೆ. ಒಂದು ವೇಳೆ ಪ್ರಾಧಿಕಾರದ ಆದೇಶವನ್ನು ಬಿಲ್ಡರ್‌ಗಳು ಉಲ್ಲಂ ಸಿದರೆ ಅವರಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವಿಧೇಯಕದಲ್ಲಿ ವಿವರಿಸಲಾಗಿದೆ.

ಮುಂಗಡ ಹಣ ಸ್ವೀಕರಿಸುವಾಗ ಒಂದು ನಕ್ಷೆ ತೋರಿಸಿ, ಬೇರೆಯದೇ ನಕ್ಷೆ ಹೊಂದಿದ ಮನೆ/ಫ್ಲ್ಯಾಟ್‌ ಹಸ್ತಾಂತರಿಸುವುದಕ್ಕೂ ವಿಧೇಯಕ ಕಡಿವಾಣ ಹಾಕಲಿದೆ. ಗ್ರಾಹಕನ ಒಪ್ಪಿಗೆ ಪಡೆಯದೇ ಬಿಲ್ಡರ್‌ಗಳು ನಕ್ಷೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಸೂಪರ್‌ ಬಿಲ್ಟ್ ಅಪ್‌ ಏರಿಯಾ (ಮನೆ ನಿರ್ಮಾಣವಾಗುವ ಒಟ್ಟು ಪ್ರದೇಶ) ಎಂಬ ಪದ ಬಳಸುವಂತಿಲ್ಲ. ಗ್ರಾಹಕನಿಗೆ ಮನೆಯಲ್ಲಿ ಒಟ್ಟಾರೆ ಸಿಗುವ ಜಾಗದ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಈ ಮಸೂದೆ ತಿಳಿಸುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited