Basavanagudi : ಶಿವರಾತ್ರಿ ಪರ್ವದ ಪ್ರಯುಕ್ತ ಶ್ರೀ ರಾಮಚಂದ್ರಾಪುರ ಮಠದ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ, ಸೋಮವಾರ, ಮಾರ್ಚ್ 7 ರಂದು ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆದಿಗುರು ಶಂಕರಾಚಾರ್ಯರಿಂದ ಪ್ರದತ್ತ, ವಿಶಿಷ್ಟವಾದ ಚಂದ್ರಮೌಳೀಶ್ವರ ಲಿಂಗಕ್ಕೆ ಶ್ರೀಗಳಿಂದ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಲಿದ್ದು, ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಂಬಿಕೊೞಲಾಗಿದೆ. ಸಂಜೆಯಿಂದಲೇ ಶ್ರೀರಾಮಾಶ್ರಮದಲ್ಲಿ ಶ್ರೀ ರುದ್ರಪಾರಾಯಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶಿವರಾತ್ರಿಯ ಮಹಾಪೂಜೆಯ ನಂತರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಭಜನೆ ಹಾಗೂ ಶಿವಾವಧಾನ ಎಂದ ವಿಶಿಷ್ಟ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.