ಬೆಂಗಳೂರು : ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಮಧ್ಯಾಹ್ನದ ವೇಳೆಯ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ.
30 ಜಿಲ್ಲಾ ಪಂಚಾಯತಿಗಳ ಪೈಕಿ ಕಾಂಗ್ರೆಸ್ 11ರಲ್ಲಿ ಜಯದ ಹಾದಿಯಲ್ಲಿದ್ದರೆ, ಪ್ರತಿಪಕ್ಷವಾದ ಬಿಜೆಪಿ 7 ಸ್ಥಾನಗಳನ್ನು ಪಡೆದು 2ನೇ ಸ್ಥಾನದಲ್ಲಿದೆ. ಜೆಡಿಎಸ್ 2, ಪಕ್ಷೇತರ 10 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.
ಅದೇ ರೀತಿ 175 ತಾಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ 64, ಬಿಜೆಪಿ 55, ಜೆಡಿಎಸ್ 19 ಹಾಗೂ 25 ಮಂದಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ.
ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.