ನವದೆಹಲಿ : ಫ್ರೀಡಂ251 ನ ವೆಬ್ ಸೈಟ್ ಡೌನ್ ಆಗಿದೆ ಎಂದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ರಿಂಗಿಂಗ್ ಬೆಲ್ಸ್ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಜಗತ್ತಿನಲ್ಲೇ ಅತಿ ಕಡಿಮೆ ದರದ,ಕೇವಲ 251 ರೂ. ದರದ ಸ್ಮಾರ್ಟ್ಫೋನ್ ಬುಧವಾರ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಗುರುವಾರ ಬೆಳಗ್ಗಿನಿಂದ ಆನ್ ಲೈನ್ ಖರೀದಿಗಾಗಿ ಕೋಟ್ಯಾಂತರ ಪ್ರಯತ್ನ ಪಡುತ್ತಿದ್ದು ಬುಕಿಂಗ್ ಸಾಧ್ಯವಾಗದೆ ನಿರಾಶರಾಗುತ್ತಿದ್ದಾರೆ.
freedom251.com ಸೈಟ್ಗೆ ಪ್ರತಿ ಸೆಕೆಂಡ್ಗೆ 6 ಲಕ್ಷ ಜನ ಎಂಟ್ರಿಯಾಗುತ್ತಿದ್ದಾರೆ.
ಸರ್ವರ್ ಓವರ್ ಲೋಡ್ ಆಗಿರುವ ಕಾರಣ ಮುಂದಿನ 24 ಗಂಟೆಗಳ ಕಾಲ ಆನ್ ಲೈನ್ ಬುಕಿಂಗ್ ಸಾಧ್ಯವಾಗುವುದಿಲ್ಲ ಎಂದು ರಿಂಗಿಂಗ್ ಬೆಲ್ಸ್ ತಿಳಿಸಿದೆ.
ಗುರುವಾರ ಫೆ.18 ಬೆಳಗ್ಗೆ 6ರಿಂದ ಬುಕಿಂಗ್ ಪ್ರಾರಂಭವಾಗಿದ್ದು ಫೆ.21 ರಾತ್ರಿ 8ರವರೆಗೆ ಫೋನ್ಗಾಗಿ ಬುಕ್ಕಿಂಗ್ ಮಾಡಬಹುದು. ಜೂ.30ರವೇಳೆಗೆ ಗ್ರಾಹಕರಿಗೆ ಫೋನ್ ಕೈ ಸೇರಲಿದೆ ಎಂದು ರಿಂಗಿಂಗ್ ಬೆಲ್ಸ್ ಪ್ರಕಟಿಸಿತ್ತು.