ಮುಂಬೈ : ಮುಂಬ್ರಾ ನಿವಾಸಿ ಇಶ್ರತ್ ಜಹಾನ್ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್ ಆಗಿದ್ದಳು ಎಂದು ಉಗ್ರ ಡೇವಿಡ್ ಹೆಡ್ಲಿ ಹೇಳಿದ್ದಾನೆ. ಗುರುವಾರ ನಡೆದ ವಿಚಾರಣೆಯ ವೇಳೆ ಹೆಡ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ.
ಯುಎಸ್ ನಿಂದ ವಿಡಿಯೋ ಕಾನ್ಫರೆನ್ಸ್ ಮೋಲಕ ವಿಚಾರಣೆ ಎದುರಿಸುತ್ತಿರುವ ಹೆಡ್ಲಿ, ೨೦೦೪ ರಲ್ಲಿ ಗುಜರಾತ್ ಪೊಲೀಸರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ ಇಶ್ರತ್ ಜಹಾನ್ ಲಷ್ಕರ್ ಎ ತೊಯ್ಬಾದ ಸದಸ್ಯಳಾಗಿದ್ದಳು ಎಂದು ಹೇಳಿದ್ದಾನೆ.
ಜೂನ್ 15, 2004 ರಂದು ಇಶ್ರತ್ ಜಹಾನ್ ಎನ್ ಕೌಂಟರ್ ನಡೆದಿತ್ತು. ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸರಿಂದ ೧೯ ವರ್ಷದ ಮುಂಬ್ರಾ ನಿವಾಸಿ ಇಶ್ರತ್ ಜಹಾನ್ ಮತ್ತು ಉಗ್ರ ಸಂಘಟನೆಯ ನಂಟಿರುವ ಆರೋಪ ಎದುರಿಸುತ್ತಿದ್ದ ಮೂವರ ಮೇಲೆ ಎನ್ ಕೌಂಟರ್ ನಡೆದಿತ್ತು.
ಆ ಸಮಯದಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು, ದಾಳಿ ನಡೆಸಲು ಇಶ್ರತ್ ಜಹಾನ್ ಮತ್ತು ಮೂವರು ಗುಜರಾತ್ ಗೆ ಬಂದಿದ್ದರೆಂದು ವರದಿಯಾಗಿತ್ತು.