ಕಠ್ಮಂಡು : ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಮಂಗಳವಾರ ನಿಧನರಾಗಿದ್ದಾರ. ಕೊಯಿರಾಲ ಅವರಿಗೆ 79 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಕೊಯಿರಾಲ ಅವರು ನ್ಯುಮೋನಿಯಾದಿಂದ ಮಂಗಳವಾರ ಬೆಳಗ್ಗೆ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಫೆ. 10,2014 ರಂದು ಪ್ರಧಾನಿ ಆಗಿ ಆಯ್ಕೆ ಆಗಿದ್ದ ಸುಶೀಲ್ ಕೊಯಿರಾಲ ಅವರು, ನಿರಂತರ ಪಕ್ಷಗಳ ಪ್ರತಿಭಟನೆ, ದೇಶದ ಹೊಸ ಸಂವಿಧಾನದಲ್ಲಿ ಕೆಲವು ವಿಷಯಗಳಲ್ಲಿ ಒಮ್ಮತ ಮೂಡದ ಕಾರಣ ಕಳೆದ ಅಕ್ಟೋಬರ್ ನಲ್ಲಿ ರಾಜಿನಾಮೆ ನೀಡಿದ್ದರು.
ಭಾರತ ಬನಾರಸ್ ನಲ್ಲಿ ಸುಶೀಲ್ ಕೊಯಿರಾಲ ಅವರು ಆಗಸ್ಟ್ 12, 1939 ರಂದು ಜನಿಸಿದ್ದರು. 1954 ರಲ್ಲಿ ರಾಜಕೀಯ ಪ್ರವೇಶಿದ್ದರು.
ಕೊಯಿರಾಲ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಒಬ್ಬ ಮೌಲ್ಯಯುತ ಸ್ನೇಹಿತನನ್ನು ಕಳೆದುಕೊಂಡಿದೆ. ಅವರ ನಿಧನನಿಂದ ತುಂಬಾ ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.