Untitled Document
Sign Up | Login    
Dynamic website and Portals
  
January 28, 2016

ಕೆ ಎಸ್‌ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ( ಸಾಂಧರ್ಭಿಕ ಚಿತ್ರ ) ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ( ಸಾಂಧರ್ಭಿಕ ಚಿತ್ರ )

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯದ 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ
ಹಾಸನ, ಮಂಡ್ಯ, ಮಡಿಕೇರಿ, ಧರ್ಮಸ್ಥಳ, ಮಂಗಳೂರು, ಕುಂದಾಪುರ, ಶಿವಮೊಗ್ಗ, ಹರಿಹರ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಬಸ್ ನಿಲ್ದಾಣಗಳಲ್ಲಿ ವೈ-ಫೈ ಸೇವೆ ಆರಂಭಿಸಲಾಗಿದೆ ಎಂದು ಕೆ ಎಸ್‌ ಆರ್ ಟಿ ಸಿ ಪ್ರಕಟಣೆ ತಿಳಿಸಿದೆ.

ವೈ-ಫೈ ಸೇವೆ ಪಡೆಯುವುದು ಹೇಗೆ? :

ಕೆ ಎಸ್‌ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುವ ವೈ-ಫೈ ಸೇವೆಯನ್ನು ಪಡೆಯಲು I-ON ನೆಟ್ ವರ್ಕ್ ಅಥವಾ ಗೂಗಲ್ ಪ್ಲೇಸ್ಟೋರ್ನಿಂದ ಉಚಿತವಾಗಿ I-ON WI-FI ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.

ಬಸ್ ನಿಲ್ದಾಣಗಳಲ್ಲಿ ಮೊಬೈಲ್, ಲ್ಯಾಪ್ಟಾಪ್ ಅಥವ ಟ್ಯಾಬ್ಲೆಟ್ನಲ್ಲಿ ಲಭ್ಯವಿರುವ ವೈ-ಫೈನಲ್ಲಿ I-ON WI-FI ಆಯ್ಕೆ ಮಾಡಬೇಕು. ಅಲ್ಲಿ 10 ಅಂಕಿಯ ಮೊಬೈಲ್ ನಂಬರ್ ನೀಡಿ, ನೋಂದಣಿ ಮಾಡಿಕೊಂಡರೆ ವೈ-ಫೈ ಪಾಸ್ಪರ್ಡ್, ಎಸ್‌ಎಂಎಸ್ ರೂಪದಲ್ಲಿ ದೊರೆಯಲಿದೆ. ಪಾಸ್ ವರ್ಡ್ ಹಾಕಿ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಬಹುದಾಗಿದೆ.

ಪ್ರಾಯೋಗಿಕವಾಗಿ ಈ ವೈ-ಫೈ ಸೇವೆಯನ್ನು ಆರಂಭಿಸಲಾಗಿದೆ. ಸದ್ಯ, 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಚಿತ್ರದುರ್ಗ ಮತ್ತು ಕೋಲಾರ ನಗರಗಳಿಗೂ ಈ ಸೇವೆ ವಿಸ್ತರಣೆ ಮಾಡಲಾಗುತ್ತದೆ ಎಂದು ಕೆ ಎಸ್‌ ಆರ್ ಟಿ ಸಿ ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Infrastructure

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
  • ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
  • ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಷರತ್ತುಬದ್ಧ ಅನುಮತಿಯನ್ನು ನೀಡಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಇಳಿಕೆ
  • ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited