Untitled Document
Sign Up | Login    
Dynamic website and Portals
  
January 25, 2016

36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳ ಸಹಿ

ಪ್ರಧಾನಿ ಮೋದಿ ಮತ್ತು ಹೊಲ್ಲಾಂಡೆ ಜಂಟಿ ಮಾಧ್ಯಮ ಗೋಷ್ಠಿ ಪ್ರಧಾನಿ ಮೋದಿ ಮತ್ತು ಹೊಲ್ಲಾಂಡೆ ಜಂಟಿ ಮಾಧ್ಯಮ ಗೋಷ್ಠಿ

ನವದೆಹಲಿ : ಬಹು ನಿರೀಕ್ಷಿತ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳು ಸೋಮವಾರ ಸಹಿ ಹಾಕಿವೆ. ಸುಮಾರು 60,000 ಕೋಟಿ ರೂ. ವೆಚ್ಚದ ಈ ಮಹತ್ವದ ಅಂತರ-ಸರಕಾರೀ ಒಪ್ಪಂದ (Inter-Governmental Agreement -IGA) ಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು, ಇನ್ನು ಕೇವಲ ಹಣಕಾಸಿನ ಬಗ್ಗೆ ಮಾತ್ರ ಮಾತುಕತೆ ಬಾಕಿ ಇದ್ದು, ಇನ್ನೆರಡು ದಿನಗಳಲ್ಲೇ ಅದು ಬಗೆಹರಿಯುವ ಸಾಧ್ಯತೆ ಇದೆ.

ಭಾರತಕ್ಕೆ ಭೇಟಿ ನೀಡುತ್ತಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವ ನಡೆದ ದೀರ್ಘ ಚರ್ಚೆಯ ನಂತರ ಎರಡೂ ದೇಶಗಳು ಒಟ್ಟು 14 ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಲ್ಲಿ ರಫೇಲ್ ವಿಮಾನ ಖರೀದಿ ಸೇರಿದಂತೆ, ಉಭಯ ದೇಶಗಳ ನಡುವೆ ಪರಮಾಣು ಇಂಧನ, ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆ ಬಗ್ಗೆ ಪರಸ್ಪರ ಸಹಯೋಗ, ಸಹಕಾರಗಳೂ ಸೇರಿವೆ.

'ಹಣಕಾಸಿನ ವಿಚಾರ ಬಿಟ್ಟರೆ ಉಳಿದಂತೆ ಭಾರತ ಮತ್ತು ಫ್ರಾನ್ಸ್ 36 ರಾಫೇಲ್ ಫೈಟರ್ ವಿಮಾನಗಳ ಖರೀದಿಗೆ ಅಂತರ-ಸರಕಾರೀ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಖರೀದಿಗೆ ಸಂಬಧಿಸಿದಂತೆ ಉಳಿದಿರುವ ಹಣಕಾಸಿನ ವಿಚಾರಗಳೂ ಆದಷ್ಟು ಬೇಗ ಬಗೆಹರಿಯಲಿವೆ ಎಂದು ನಾವು ಆಶಿಸುತ್ತೇವೆ' ಎಂದು ಪ್ರಧಾನಿ ಮೋದಿ ಹೊಲ್ಲಾಂಡೆ ಅವರೊಂದಿಗೆ ಜಂಟಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಹೇಳಿದರು.

'ಇದೊಂದು ದೃಢ ನಿರ್ಧಾರ' ಎಂದು ಹೇಳಿದ ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆ, 'ಇನ್ನು ಒಂದೆರಡು ದಿನಗಳಲ್ಲೇ ಹಣಕಾಸಿನ ವಿಚಾರಗಳು ಬಗೆಹರಿಯಲಿವೆ' ಎಂದು ಆಶಿಸಿದರು.

ಈ ಬಗ್ಗೆ ಎರಡೂ ದೇಶಗಳು ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದು, ಭಾರತದ ವಾಯುಪಡೆಗೆ ಅತ್ಯಂತ ತುರ್ತಾಗಿ ಬೇಕಾದ ಈ ವಿಮಾನಗಳನ್ನು ಹಾರಾಟಕ್ಕೆ ತಯಾರಿರುವ (ಫ್ಲೈ ಅವೇ) ಸ್ಥಿತಿಯಲ್ಲೇ ಪಡೆಯಲಾಗುತ್ತದೆ.

36 ವಿಮಾನಗಳಿಗೆ ಸುಮಾರು 60,000 ಕೋಟಿ ರೂ. ವೆಚ್ಚ ತಗಲಲಿದ್ದು, ಈ ಬಗ್ಗೆ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ. ಫ್ರಾನ್ಸ್ ದೇಶದ ಉನ್ನತ ಮಟ್ಟದ ನಿಯೋಗ ಸಹ ಭಾರತ ಬಂದಿದ್ದು, ಇದರಲ್ಲಿ ಭಾಗಿಯಾಗಿದೆ.

ಭಾರತದ ಮಟ್ಟಿಗೆ ಇದು ಅತ್ಯಂತ ಮಹತ್ವದ ನಿರ್ಧಾರವಾಗಿದ್ದು, ಹಳೆಯದಾಗುತ್ತಿರುವ ಮತ್ತು ಅಪಘಾತಗಳಿಂದ ಕ್ಷೀಣಿಸುತ್ತಿರುವ ವಾಯು ಪಡೆಯ ಯುದ್ಧ ವಿಮಾನಗಳ ಸಂಖ್ಯಾಬಲವನ್ನು ಸರಿದೂಗಲು ಈ ವಿಮಾನಗಳು ತುರ್ತಾಗಿ ಬೇಕಾಗಿವೆ. ಅಲ್ಲದೆ, ನೆರೆಯ ಪಾಕಿಸ್ತಾನ ಹಾಗೂ ಚೀನಾ ದೇಶಗಳ ಆಕ್ರಮಣಕಾರೀ ಧೋರಣೆಗಳನ್ನು ಸಮರ್ಥವಾಗಿ ಎದುರಿಸಲು ಸಹ ಇದು ಅಗತ್ಯವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited