Untitled Document
Sign Up | Login    
Dynamic website and Portals
  
January 21, 2016

ಪಾಕಿಸ್ತಾನದ ಬಳಿ ಸುಮಾರು 130 ಅಣ್ವಸ್ತ್ರಃ ಯುಎಸ್ ವರದಿ

ವಾಷಿಂಗ್ಟನ್‌ : ಪಾಕಿಸ್ತಾನದ ಬಳಿ ಸುಮಾರು 110 ರಿಂದ 130 ಅಣ್ವಸ್ತ್ರಗಳಿದ್ದು, ಇವುಗಳನ್ನು ಅದು ಭಾರತ ತನ್ನ ವಿರುದ್ಧ ಯಾವುದೇ ರೀತಿಯ ಮಿಲಿಟರಿ ಕಾರ್ಯಾಚರಣೆ ತಡೆಯುವ ಉದ್ದೇಶಕ್ಕಾಗಿಯೇ ಹೊಂದಿದೆ ಎಂಬುದಾಗಿ ಅಮೆರಿಕದ ಸಂಸತ್ತಿಗೆ ಸಲ್ಲಿಸಲಾಗಿರುವ ವರದಿ ಹೇಳಿದೆ.

ಇದರಿಂದ ಎರಡು ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವೆ ಪರಮಾಣು ಸಂಘರ್ಷದ ಅಪಾಯ ಹೆಚ್ಚಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಪಾಕಿಸ್ತಾನದ ಬಳಿ ಕನಿಷ್ಟ 110 ರಿಂದ 130 ರಷ್ಟು ಅಣ್ವಸ್ತ್ರ ಸಿಡಿತಲೆಗಳಿವೆ. ಇದಕ್ಕಿಂತಲೂ ಹೆಚ್ಚು ಅಣು ಬಾಂಬ್‌ಗಳು ಅದರ ಬಳಿ ಇರುವ ಸಾಧ್ಯತೆಗಳಿವೆ. ಮಾತ್ರವಲ್ಲದೆ ಇಸ್ಲಾಮಾಬಾದ್‌ ಅಣು ಬಾಂಬ್‌ ಉತ್ಪಾದಿಸುವ ಘಟಕಗಳನ್ನು ಬಹು ಸಂಖ್ಯೆಯಲ್ಲಿ ನಿರ್ಮಿಸುತ್ತಿದೆ ಮಾತ್ರವಲ್ಲ ಅಣ್ವಸ್ತ್ರ ಪ್ರಯೋಗಿಸುವ ಸೌಕರ್ಯಗಳನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದೆ. ಜತೆಗೆ ವಿನೂತನ ಅಣ್ವಸ್ತ್ರ ವಾಹಕಗಳನ್ನು ಕೂಡ ಅದು ಸಿದ್ಧಪಡಿಸುತ್ತಿದೆ. ಇವೆಲ್ಲದರ ಪರಿಣಾಮವಾಗಿ ಪಾಕಿಸ್ತಾನದಿಂದ ಇಡಿಯ ದಕ್ಷಿಣ ಏಷ್ಯಾಗೆ ಅಣ್ವಸ್ತ್ರ ಬೆದರಿಕೆ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದು ವರದಿಯು ಎಚ್ಚರಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited