Untitled Document
Sign Up | Login    
Dynamic website and Portals
  
January 20, 2016

ಪಾಕಿಸ್ತಾನದ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರ ದಾಳಿ

ಇಸ್ಲಾಮಾಬಾದ್ : ಬುಧವಾರ ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿರುವ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕೆಮೆಸ್ಟ್ರಿ ಪ್ರೊಫೆಸರ್ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ.

ಬಂದೂಕು ಧಾರಿ ಉಗ್ರರ ಗುಂಪೊಂದು ಪೇಶಾವರದಲ್ಲಿನ ಬಚಾಖಾನ್ ಯೂನಿರ್ವಸಿಟಿ ಒಳಗೆ ನುಗ್ಗಿದ್ದು ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸುಮಾರು 3000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದೊಳಗಿದ್ದರು.

ಪಾಕ್ ಸೇನಾಪಡೆ ಯೂನಿರ್ವಸಿಟಿ ಸುತ್ತಮುತ್ತ ಸುತ್ತವರಿದಿದ್ದು, ಪಾಕ್ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ. ಶೇ. 70 ರಷ್ಟು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.

 

 

Share this page : 
 

Table 'bangalorewaves.bv_news_comments' doesn't exist