Untitled Document
Sign Up | Login    
Dynamic website and Portals
  
January 14, 2016

ಗೋಮಹೋತ್ಸವ - ಸಂಕ್ರಾಂತಿಗೆ ರಾಮಚಂದ್ರಾಪುರ ಮಠದಿಂದ ವಿಶಿಷ್ಟ ಕಾರ್ಯಕ್ರಮ

ಗೋಮಹೋತ್ಸವ - ಸಂಕ್ರಾಂತಿಗೆ ರಾಮಚಂದ್ರಾಪುರ ಮಠದಿಂದ ವಿಶಿಷ್ಟ ಕಾರ್ಯಕ್ರಮ

ಬೆಂಗಳೂರು : ಈ ವರ್ಷ ಸಂಕ್ರಾತಿಯಂದು ಶುಕ್ರವಾರ, ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಗೋಮಹೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜನರ ಮನೆ-ಮನಗಳಿಂದ ದೂರವಾಗುತ್ತಿದ್ದ ಭಾರತೀಯ ಗೋವಂಶವನ್ನು ಗೋಯಾತ್ರೆ, ಗೋಸಂಸತ್,ವಿಶ್ವ ಗೋ ಸಮ್ಮೇಳನ, ವಿಶ್ವಮಂಗಲ ಗೋಗ್ರಾಮಯಾತ್ರೆ ಮುಂತಾದ ಕಾರ್ಯಕ್ರಮ ವೈವಿಧ್ಯಗಳಮೂಲಕ ಗೋವಿನ ಕುರಿತಾಗಿ ಅರಿವನ್ನು ಮೂಡಿಸಿ, ಜಾಗತಿಕ ಮಟ್ಟದ ಗೋಷ್ಠಿಗಳ ಮೂಲಕ ಗೋಜಾಗೃತಿಯನ್ನು ಉಂಟು ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಪ್ರಸ್ತುತ 'ಗೋಮಹೋತ್ಸವ' ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.

ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ - ಸಾಮಾಜಿಕ - ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ ಗೋವಂಶದ ಸಂರಕ್ಷಣೆ-ಸಂವರ್ಧನೆ-ಸಂಶೋಧನೆ-ಸಂಬೋಧನೆಗಳೆಂಬ ಮಹತ್ತರವಾದ ಆಶಯಗಳೋಂದಿಗೆ ಕಾರ್ಯಾಚರಿಸುತ್ತಿರುವ ‘ಕಾಮದುಘಾ’ ಶ್ರೀಗಳ ಮಹತ್ವದ ಯೋಜನೆಗಳಲ್ಲೋಂದು. ಪ್ರಕೃತ ‘ಕಾಮದುಘಾಯೋಜನೆಯ ವಾರ್ಷಿಕ ದಿನವನ್ನು ‘ಗೋಮಹೋತ್ಸವ’ವಾಗಿ ಆಚರಿಸಲಾಗುತ್ತಿದೆ.

ಈ ಬಾರಿ ಸಂಕ್ರಾಂತಿ ಹಬ್ಬದ ಮೆರುಗನ್ನು ಹೆಚ್ಚಿಸಲೋ ಎಂಬಂತೆ ಸಂಕ್ರಾಂತಿಯ ದಿನದಂದು ಕಾಮದುಘಾ ತನ್ನ ವಾರ್ಷಿಕ ದಿನವನ್ನು ಗೋಕೇಂದ್ರಿತ ಜೀವನ ಕ್ರಮವನ್ನು ಅನಾವರಣಗೋಳಿಸುವ ಸಲುವಾಗಿ 'ಗೋಮಹೋತ್ಸವ'ವಾಗಿ ಆಚರಿಸಿಸಲಾಗುತ್ತಿದ್ದು, ಸಾಂಸ್ಕೃತಿಕ-ಆರ್ಥಿಕ-ಧಾರ್ಮಿಕ ಜಗತ್ತಿನ ಜೀವನಾಡಿಯಾದ ಗೋವುಗಳ ಪ್ರಾಮುಖ್ಯತೆಯನ್ನು ಜನಮಾನಸಕ್ಕೆ ಸಾರಿಹೇಳುವ ದಿಶೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವೈಶಿಷ್ಟ್ಯಪೂರ್ಣವಾದ ವೈಚಾರಿಕ- ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ ವಿಶೇಷಗಳ ಮೂಲಕ 'ಗೋಮಹೋತ್ಸವ' ಸಂಪನ್ನವಾಗಲಿದ್ದು, ಈ ಎಲ್ಲಾ ವೈವಿಧ್ಯಭರಿತವಾದ ಕಾರ್ಯಕ್ರಮಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲಾ ವಯೋಮಾನದವರ ಮನಸಿನಲ್ಲಿ ಗೋವಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಗೆ, ಗೋ ಕೇಂದ್ರಿತವಾದ ಸಮಗ್ರ ಜೀವನಕ್ರಮವನ್ನು ಪರಿಚಯಿಸಲಿದೆ.

 

ಗೋಮಹೋತ್ಸವ - ಸಂಕ್ರಾಂತಿಗೆ ರಾಮಚಂದ್ರಾಪುರ ಮಠದಿಂದ ವಿಶಿಷ್ಟ ಕಾರ್ಯಕ್ರಮ
ಪ್ರಮುಖ ಕಾರ್ಯಕ್ರಮಗಳು:


* ವೈವಿಧ್ಯಮಯವಾದ ಭಾರತೀಯ ಗೋತಳಿಗಳ ಅತ್ಯಾಕರ್ಷಕವಾದ ಗೋವುಗಳ ಪ್ರದರ್ಶನ.

* ಗೋವುಗಳಿಗೆ ಸಂಬಂಧಿಸಿದ ಪಾರಂಪರಿಕ ವಿವಿಧ ಅಮೂಲ್ಯ ವಸ್ತುಗಳ ಪ್ರದರ್ಶನ – ಗೋ ಮ್ಯೂಸಿಯಂ

* ವೈವಿಧ್ಯಮಯ ನಿತ್ಯೋಪಯೋಗಿ ಗವ್ಯೋತ್ಪನ್ನಗಳ ಪ್ರದರ್ಶನಾ ಹಾಗೂ ಮಾರಾಟಾ.

* ಶುದ್ಧ ಭಾರತೀಯ ತಳಿಯ ಗೋವುಗಳ ಹಾಲು,ತುಪ್ಪ,ಮಜ್ಜಿಗೆ ಇತ್ಯಾದಿಗಳಿಂದ ತಯಾರಿಸಲಾದ ಹತ್ತುಹಲವು ಬಗೆಯ ಸ್ವಾಧಿಸ್ಟವಾದ ರುಚಿಕರ ಆಹಾರಗಳ ಪ್ರದರ್ಶನ ಹಾಗೂ ಮಾರಾಟ - ಪಾಕೋತ್ಸವ

* ವಿವಿಧ ರೋಗಗಳಿಗೆ ಗವ್ಯಾಧಾರಿತವಾದ ಚಿಕಿತ್ಸೆ ಮತ್ತು ಮಾಹಿತಿ – ಗವ್ಯಚಿಕಿತ್ಸೆ

* ಶಾಲಾವಿಧ್ಯಾರ್ಥಿಗಳಿಗೆ ಗೋಸಂಬಂಧಿ ಹಾಡು-ಭಾಷಣ-ಚಿತ್ರಕಲೆ ಹಾಗೂ ಭಾರತೀಯ ಗೋತಳಿಗಳನ್ನು ಗುರುತಿಸುವ ಆಟ-ಸ್ಪರ್ಧೆಗಳು, ಸಾರ್ವಜನಿಕರಿಗೆ ಗೋಸಂಬಂಧಿತ ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳು.

* ಗೋವಿನ ಕುರಿತಾಗಿ ಮನಮೋಹಕವಾದ ಜಾನಪದ ಹಾಡು- ನೃತ್ಯ – ರೂಪಕಗಳ ಪ್ರದರ್ಶನ.

* ಗೋವಿನ ಕುರಿತಾದ ವಿಚಾರ ಸಂಕಿರಣದಲ್ಲಿ NDRI ಸಂಸ್ಥೆಯ ವಿಜ್ಜಾನಿಗಳಾದ ಕೆ.ಪಿ ರಮೇಶ್ ಅವರು ‘ಆಧುನಿಕ ಜಗತ್ತಿನಲ್ಲಿ ಪಂಚಗವ್ಯ’ದ ಕುರಿತು, ಸುಶೃತ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಅವರು ‘ಆರೋಗ್ಯಪೂರ್ಣ ಜೀವನಕ್ಕೆ ಗೋವು-ಗವ್ಯೋತ್ಪನ್ನಗಳ ಅಗತ್ಯತೆ’, ಆಂದ್ರಪ್ರದೇಶದ ಪಶುಪಾಲನಾ ಇಲಾಖೆಯ ಡಾ. ಸಾಯಿ ಬುಚತ್ ರಾವ್ ಅವರು’ ಕೃಷಿಯಲ್ಲಿ ಗೋವಿನ ಪ್ರಾಮುಖ್ಯತೆ’ಯ ಕುರಿತು ವಿಚಾರಗಳನ್ನು ಮಂಡಿಸುವರು. ಭಾರತೀಯ ಯೋಗಧಾಮದ ಕೆ ಎಲ್ ಶಂಕರನಾರಾಯಣ ಜೋಯ್ಸ್ ಅವರು ವಿಚಾರ ಮಂಥನ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವರು.

* ವಿಶೇಷವಾಗಿ ಅಲಂಕರಿಸಿದ ಎತ್ತಿನಗಾಡಿಯಲ್ಲಿ ಪ್ರಯಾಣ, ಮುದ್ದಾದ ಕರುಗಳೋಂದಿಗೆ ಮುದ್ದುಮಗುವಿನ ಚಿತ್ರ ಇತ್ಯಾದಿ ಮಕ್ಕಳಿಗೆ ಆಕರ್ಷಣೀಯವಾದ ಕಾರ್ಯಕ್ರಮಗಳು.

ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ಭಾರತೀ ವಿದ್ಯಾಲಯ,

5 ನೇ ಮುಖ್ಯರಸ್ತೆ, 11 ನೇ ಅಡ್ಡರಸ್ತೆ,
ಆರ್ ಪಿ ಸಿ ಲೇಔಟ್, ವಿಜಯನಗರ,
ಬೆಂಗಳೂರು

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited