Untitled Document
Sign Up | Login    
Dynamic website and Portals
  
January 4, 2016

ಪಠಾನ್ ಕೋಟ್ ಉಗ್ರರ ದಾಳಿಃ ಮೂರನೇ ದಿನಕ್ಕೆ ಮುಂದುವರಿದ ಗುಂಡಿನ ಚಕಮಕಿ

ಬೆಂಗಳೂರಿನ ಯೋಧ ಲೆ| ಕ| ನಿರಂಜನ ಕುಮಾರ್‌ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಎನ್‌ಎಸ್‌ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್‌ ಗೆ ಅಂತಿಮ ನಮನ ಎನ್‌ಎಸ್‌ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್‌ ಗೆ ಅಂತಿಮ ನಮನ

ಪಂಜಾಬ್ : ಸೋಮವಾರ ಸಹ ಪಠಾಣ್ ಕೋಟ್ವಾಯುನೆಲೆಯಲ್ಲಿ ಭಾರೀ ಗುಂಡಿನ ಸದ್ದು ಕೇಳಿದ್ದು, ಕಾರ್ಯಾಚರಣೆ 3 ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ 5 ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಎನ್‌ಎಸ್‌ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್‌ ಸೇರಿದಂತೆ 7 ಯೋಧರು ವೀರಮರಣವನ್ನಪ್ಪಿದ್ದಾರೆ.

ಹಗಲು ರಾತಿ ಗುಂಡಿನ ಚಕಮಕಿ ಮುಂದುವರಿದಿದ್ದು, ಉಗ್ರರು 2 ತಂಡಗಳಲ್ಲಿ ವಾಯುನೆಲೆಯನ್ನು ಪ್ರವೇಶಿಸಿರಬಹುದೆಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಪೊಲೀಸ್ ಅಧಿಕಾರಿಯ ಕಾರನ್ನು ಅಪಹರಿಸಿ ವಾಯುನೆಲೆಗೆ ಪ್ರವೇಶಿಸಿದ ತಂಡ ಒಂದಾದರೆ, 5 ಜನಕ್ಕೂ ಹೆಚ್ಚು ಉಗ್ರರಿರುವುದರಿಂದ, ಇನ್ನೊಂದು ತಂಡ ಇದೆ ಎನ್ನುವುದನ್ನು ತಿಳಿಸುತ್ತದೆ ಎಮ್ದು ಮೂಲಗಳು ತಿಳಿಸಿವೆ.

ಪಾಲಕ್ಕಾಡ್‌ ಜಿಲ್ಲೆಯ ಮುನ್ನರಾರ್‌ ಕಾಡ್‌ ಮೂಲದವರಾದ, ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದಿದ್ದ ಎನ್‌ಎಸ್‌ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್‌ ಅವರು ಈ ದಾಳಿಯಲ್ಲಿ ಹುತಾತ್ಮರಾಗಿದ್ದು, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಶಾಲಾ ಮಕ್ಕಳು ಮತ್ತು ಸ್ಥಳೀಯರು ನಿರಂಜನ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ್ದಾರೆ. ಬೆಮಲ್ ಮೈದಾನದಲ್ಲಿಡಲಾದ ನಿರಂಜನ್ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗೌರವ ಸಲ್ಲಿಸಿದ್ದಾರೆ. ಕೇರಳದ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.

 

 

English Summary : 7 soldiers and 5 terrorist were killed so far in terror attack on airbase at Pathankot. Fresh gunshots were heard Monday morning also.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited