Untitled Document
Sign Up | Login    
Dynamic website and Portals
  
January 3, 2016

ವೈಜ್ಞಾನಿಕ ಸಂಶೋಧನೆ ಮಾಡುವುದನ್ನು ಸುಲಭಗೊಳಿಸಲಾಗುವುದುಃ ಪ್ರಧಾನಿ ನರೇಂದ್ರ ಮೋದಿ

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ವೈಜ್ಞಾನಿಕ ಸಂಶೋಧನೆ ಮತ್ತು ವಿಜ್ನಾನದ ಆಡಳಿತವನ್ನು ಸುಲಭಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ್ 103 ನೇ ಭಾರತೀಯ ವಿಜ್ನಾನ ಕಾಂಗ್ರೆಸ್ ಸಮಾವೇಶವನ್ನು ಭಾನುವಾರ ಮೈಸೂರಿನಲ್ಲಿ ಉದ್ಘಾಟಿಸಿ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನನಗೆ ಹೊಸವರ್ಷದ ಆರಂಭದಲ್ಲೇ ವಿಜ್ಞಾನ , ತಂತ್ರಜ್ಞಾನದೊಂದಿಗೆ ಈ ಸಮಾವೇಶದಲ್ಲಿ ಭಾಗಿಯಾಗುವ ಅವಕಾಶ ದೊರಕಿರುವುದು ಸಂಭ್ರಮ ತಂದಿದೆಎಂದರು.

ವಿಜ್ಞಾನ ಎನ್ನುವುದು ಬಡವರು ,ಹಿಂದುಳಿದವರ ಅಭಿವೃದ್ದಿಗೆಸಹಕಾರಿಯಾಗಬೇಕು .ಇಂದು ಭಾರತ ಕೈಗಾರಿಕಾ ಕ್ಷೇತ್ರದಲ್ಲಿ ವೇಗವಾಗಿ ಅಭಿವೃದ್ದಿಯಾಗುತ್ತಿದೆ.ದೇಶದಲ್ಲಿ ಉದ್ಯೋಗಾವಕಾಶವೂ ಹೆಚ್ಚುತ್ತಿದೆ,ಭಾರತ ಕೇವಲ ಸ್ವತಂತ್ರ ರಾಷ್ಟ್ರವಲ್ಲ ,ಸ್ವತಂತ್ರವಾಗಿ ನಿಲ್ಲಬಲ್ಲ ರಾಷ್ಟ್ರಎಂದರು.

ವಿಜ್ನಾನಿಗಳಿಗೆ ಐದು 'ಇ'(E) ನ ಹೊಸ ಮಂತ್ರವನ್ನು ಹೇಳಿದರು. ಪ್ರಧಾನಿ ಮೋದಿ ಹೇಳಿದ ಐದು ಇ ಗಳೆಂದರೆ, ಆರ್ಥಿಕತೆ(Economy),ಪರಿಸರ(Enviornment),ಶಕ್ತಿ(Energy),ಅನುಭೂತಿ(Empathy),ಇಕ್ವಿಟಿ(Equity).

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ರಾಜ್ಯಪಾಲ ವಜುಭಾಯಿವಾಲಾ , ಕೇಂದ್ರ ವಿಜ್ಞಾನ ಮತ್ತು ತಂತ್ರಜಾnನ ಖಾತೆ ಸಚಿವ ಡಾ.ಹರ್ಷವರ್ಧನ್‌, ರಾಜ್ಯ ಖಾತೆ ಸಚಿವ ಚೌಧರಿ, ವಿಜ್ಞಾನ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಸಕ್ಸೇನಾ ಸೇರಿದಂತೆ ಹಿರಿಯ ವಿಜ್ಞಾನಿಗಳು ಭಾಗಿಯಾಗಿದ್ದರು.

ಈ ವೇಳೆ ಪ್ರಧಾನಿ ಮೋದಿ ಅವರು ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 28 ವಿಜ್ಞಾನಿಗಳಿಗೆ ವಿವಿ ಶತಮಾನೋತ್ಸವ ಹಾಗೂ ವಿಜ್ಞಾನ ಕಾಂಗ್ರೆಸ್‌ ವತಿಯಿಂದ ಸನ್ಮಾನ ಮಾಡಿದರು.

7 ಮಂದಿ ನೋಬೆಲ್‌ ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ಪದಕ ಹಾಗೂ 11 ಮಂದಿಗೆ ಪ್ರಧಾನಮಂತ್ರಿಗಳ ಪುರಸ್ಕಾರ ನೀಡಲಾಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited