ನವದೆಹಲಿ : ಹೊಸ ವರ್ಷದ ಆರಂಭಕ್ಕೆ ಪ್ರತಿ ಲೀಟರ್ ಪೆಟ್ರೋಲ್ 63 ಪೈಸೆ ಮತ್ತು ಡೀಸೆಲ್ 1.06 ರೂ. ಇಳಿಕೆ ಮಾಡಿ ತೈಲ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.
ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಒಂದು ತಿಂಗಳಿನಲ್ಲಿ ಮೂರನೇ ಬಾರಿ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗಿವೆ. ಡಿ.16ರಂದು ಪೆಟ್ರೋಲ್ 50 ಪೈಸೆ ಮತ್ತು ಡೀಸೆಲ್ 46 ಇಳಿಸಲಾಗಿತ್ತು. ಅದೇ ರೀತಿ ಡಿ.1 ರಂದು ಪೆಟ್ರೋಲ್ 58 ಪೈಸೆ ಮತ್ತು ಡೀಸೆಲ್ 25 ಇಳಿಕೆ ಮಾಡಲಾಗಿತ್ತು.
ಹೊಸ ದರ ಗುರುವಾರ ರಾತ್ರಿಯಿಂದಲೇ ಜಾರಿಯಾಗಿದೆ.