ಬೆಂಗಳೂರು : ವಿಧಾನ ಪರಿಷತ್ ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬುದ್ದಿವಂತ ಮತದಾರರು ಬಂಡಾಯ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಯಾವುದೇ ಮಾತುಗಳಿಗೆ ಮರುಳಾಗಿಲ್ಲ ಎಂದರು.
ಈವರೆಗಿನ ಫಲಿತಾಂಶದಂತೆ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಗೆಲುವು ಸಾಧಿಸಿ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 4 ಕ್ಷೇತ್ರಗಳಲ್ಲಿ ಗೆದ್ದು 2 ಕಡೆ ಮುನ್ನಡೆಯಲ್ಲಿದ್ದರೆ, ಜೆಡಿಎಸ್- 2 ಕಡೆ, ಇತರರು 2 ಕಡೆ ಮುನ್ನಡೆಯಲ್ಲಿದ್ದಾರೆ.