Untitled Document
Sign Up | Login    
Dynamic website and Portals
  
December 9, 2015

ಧರ್ಮಸ್ಥಳದಲ್ಲಿ 83-ನೇ ಸರ್ವಧರ್ಮ ಸಮ್ಮೇಳನ

83ನೇ ಸರ್ವಧರ್ಮ ಸಮ್ಮೇಳ ಉದ್ಘಾಟನೆ 83ನೇ ಸರ್ವಧರ್ಮ ಸಮ್ಮೇಳ ಉದ್ಘಾಟನೆ

ಬೆಳ್ತಂಗಡಿ : ಸಾಮರಸ್ಯ, ಸಹಿಷ್ಣುತೆ ಭಾರತೀ ಸಂಸ್ಕೃತಿಯ ಹೆಗ್ಗುರುತು. ಧರ್ಮ ಸಮ್ಮೇಳನ&id=19016'>ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುವುದು ಶಾಂತಿ ಸಹಬಾಳ್ವೆಯನ್ನು ಕಾಪಾಡಲು ಪ್ರೇರಕ ಶಕ್ತಿಯಿದ್ದಂತೆ. ಯಾವುದೇ ಧರ್ಮವಿರಲಿ ಅದರ ಅಂತಿಮ ಗುರಿ ಶಾಂತಿ, ಸಹಬಾಳ್ವೆಯನ್ನು ಕಾಪಾಡುವುದು. ಧರ್ಮ ಮೂಲತಹವಾಗಿ ಯಾವುದೇ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಸಹಕಾರಿ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ&id=19016'>ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ಆಯೋಸಿದ್ದ 83ನೇ ಧರ್ಮ ಸಮ್ಮೇಳನ&id=19016'>ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ನಾಗರೀಕತೆ ಹೆಚ್ಚಿದಂತೆ ಕ್ರೌರ್ಯವೂ ಈ ಕೂಡ ಹೆಚ್ಚುತ್ತಿದೆ. ಹಿಂಸೆ ನಿರಂತರ ಮತ್ತು ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಯಾಯ ಧರ್ಮವನ್ನು ಸರಿಯಾಗಿ ಅರಿಕೊಳ್ಳದೇ ಇರುವುದು. ಬಹಳ ಶತಮಾನಗಳ ಹಿಂದೆಯೇ ನಮ್ಮ ಹಿರಿಯರು ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಅದರ ಅರ್ಥವನ್ನು ಇಂದು ಸರಿಯಾಗಿ ಅರ್ಥೈಸಿಕೊಳ್ಳಲು ಧರ್ಮ ಸಮ್ಮೇಳನ&id=19016'>ಸರ್ವಧರ್ಮ ಸಮ್ಮೇಳನಗಳು ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರಿನ ಶೆರಿಯಾರ್ ಡಿ. ವಕೀಲ್ ಅವರು ಪಾರ್ಸಿ ಧರ್ಮದ ಆಚಾರ ವಿಚಾರಗಳ ಬಗ್ಗೆ ಮಾತನಾಡಿ, ದೇವರು ಮನುಷ್ಯನನ್ನು ಇನ್ನೊಬ್ಬ ಮನುಷ್ಯನ್ನು ನಂಬಲಿ ಎಂದು. ಇಂದು ನಾವು ಯಾರನ್ನೂ ನಂಬದ ಪರಿಸ್ಥಿತಿ ಬಂದೊದಗಿದೆ. ಮಾನವೀಯತೆಯ ಜೊತೆಗೆ ನಂಬಿಕೆಯೂ ಕೂಡ ಇಂದು ಕಳೆದುಹೋಗುತ್ತಿದೆ ನುಡಿದರು.

ಪ್ರತಿಯೊಬ್ಬರನ್ನು ಪ್ರೀತಿಸಿ, ಪ್ರತಿಯೊಂದು ಧರ್ಮವನ್ನು ಗೌರವಿಸಿ. ನಿಜವಾದ ಪ್ರೀತಿಯಿಂದ ಮಾತ್ರ ಕೆಟ್ಟ ವಿಚಾರಗಳನ್ನು ನಾಶ ಮಾಡಲು ಸಾಧ್ಯ. ಜೀವನದ ಕೆಲವು ಕಾರ್ಯಗಳನ್ನು ಸಮರ್ಥವಾಗಿ ಪೂರೈಸುವುದಕ್ಕಾಗಿಯೇ ನಾವು ಹುಟ್ಟಿರುತ್ತೇವೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಮುಖ್ಯ. ನಮ್ಮ ಅರ್ಹತೆಗೆ ತಕ್ಕಂತೆ ಆಸೆಯನ್ನು ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಚೆನ್ನೈನ ಡಾ. ತಮಿಳ್ ಸೆಲ್ವಿ ಜೈನ ಧರ್ಮದ ಬಗ್ಗೆ ಮಾತನಾಡಿ, ಜೈನ ಧರ್ಮವು ಕನಾಟಕದ ಭವ್ಯ ಸಂಸ್ಕೃತಿಗೆ ಅಡಿಪಾಯ ಹಾಕಿಕೊಟ್ಟಿದೆ. ಅಹಿಂಸಾ ತತ್ವನ್ನು ಜಗತ್ತಿಗ ಸಾರಿದ ಧರ್ಮವೆಂದರೆ ಅದು ಜೈನ ಧರ್ಮ. ಮಾನವೀಯತೆಯನ್ನು ಕಳೆದುಕೊಳ್ಳಬಾರದೆಂದು ಎಲ್ಲಾ ಧರ್ಮವು ಪ್ರತಿಪಾದಿಸಿದೆ. ಎಲ್ಲಾ ಧರ್ಮಗಳ ತಳಹದಿ ದಯೆ ಎಂದು ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ
  • ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ
  • 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited