ಜಮ್ಮು : ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ತಾಂಗ್ದಾರ್ ಸೆಕ್ಟರ್ನಲ್ಲಿರುವ ಸೇನಾ ಶಿಬಿರದ ಮೇಲೆ ಬುಧವಾರ ಬೆಳಗ್ಗೆ ಶಸ್ತ್ರಾಸ್ತ್ರ ಸಜ್ಜಿತರಾದ ಉಗ್ರರು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸೇನಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ.
ಬೆಳಗ್ಗೆ 7:40 ರ ಸುಮಾರಿಗೆ ಸೇನಾ ಶಿಬಿರದ ಹತ್ತಿರ ಗಡಿರೇಖೆಯಲ್ಲಿರುವ ಪರ್ವತಶ್ರೇಣಿ ಮಧ್ಯೆ ನಿಂತು 3-4 ಉಗ್ರರು ದಾಳಿ ನಡೆಸಿದ್ದಾರೆ. ಗ್ರಾನೇಟ್ಸ್ ಗಳನ್ನು ಸಹ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಸೇನಾ ಪಡೆಗಳು ಪ್ರತಿ ದಾಳಿ ನಡೆಸಿದ್ದರೆ. ಉಗ್ರರ ವಿರುದ್ದ ವ್ಯಾಪಕ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯಾವುದೇ ಸಾವು ನೋವಿನ ಬಗ್ಗೆ ಇದುವರೆಗೆ ವರದಿಯಾಗಿಲ್ಲ.