Vijayanagar : ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್ 2 ನಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸುಮಾರು ಎರಡೂವರೆ ವರ್ಷಗಳಿಂದ ಈ ಮಾರ್ಗದ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಮೂಲಕ 4 ಕಿ.ಮೀ. ಉದ್ದದ ಸುರಂಗ (ಮಾಗಡಿ ರಸ್ತೆಯಿಂದ ಕಬ್ಬನ್ಪಾರ್ಕ್) ಹೊರತುಪಡಿಸಿ ಇಡೀ ಪೂರ್ವ-ಪಶ್ಚಿಮ ಕಾರಿಡಾರ್ನ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಗೊಂಡಂತಾಗಿದೆ. ಈ ಕಾರಿಡಾರ್ನ ಒಟ್ಟಾರೆ ಉದ್ದ 18.10 ಕಿ.ಮೀ. ರೀಚ್-2 ಮಾಗಡಿ ರಸ್ತೆ, ಹೊಸಹಳ್ಳಿ, ಅತ್ತಿಗುಪ್ಪೆ, ವಿಜಯನಗರ, ಗೀತಾಂಜಲಿನಗರ, ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.
ಟಿಕೆಟ್ ದರ
ಎಲ್ಲಿಂದ ಎಲ್ಲಿಗೆ ದರ (ರೂ.ಗಳಲ್ಲಿ)
ಮಾಗಡಿ ರಸ್ತೆ ಹೊಸಹಳ್ಳಿ 10
ಮಾಗಡಿ ರಸ್ತೆ ವಿಜಯನಗರ 13
ಮಾಗಡಿ ರಸ್ತೆ ಅತ್ತಿಗುಪ್ಪೆ 14
ಮಾಗಡಿ ರಸ್ತೆ ದೀಪಾಂಜಲಿನಗರ 16
ಮಾಗಡಿ ರಸ್ತೆ ಮೈಸೂರು ರಸ್ತೆ 17