Untitled Document
Sign Up | Login    
Dynamic website and Portals
  
October 20, 2015

ನಿರ್ದೇಶಕ, ನಟ ಕೆ ಎಸ್ ​ಎಲ್ ಸ್ವಾಮಿ ವಿಧಿವಶ

ನಿರ್ದೇಶಕ,  ನಟ ಕೆ ಎಸ್ ​ಎಲ್ ಸ್ವಾಮಿ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಟ ಕೆ ಎಸ್‌ ಎಲ್‌ ಸ್ವಾಮಿ (77) ಆನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮಿಯವರನ್ನು ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಗುಣಮುಖರಾದ ಸ್ವಾಮಿಯವರನ್ನು ಸೋಮವಾರ ಮನೆಗೆ ಕರೆತರಲಾಗಿತ್ತು. ಆದರೆ ಮಂಗಳವಾರ ಮುಂಜಾನೆ ಆರೋಗ್ಯದಲ್ಲಿ ಏರುಪೇರಾಗಿ ಮರಣ ಹೊಂದಿದರು ಎಂದು ತಿಳಿದುಬಂದಿದೆ.

ಕೆ.ಎಸ್‌.ಎಲ್‌.ಸ್ವಾಮಿ ಆವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ.

ಸ್ವಾಮಿ ಆವರು ಹಿಮಪಾತ , ಮುತ್ತೈದೆ ಭಾಗ್ಯ , ದೇವರು ಕೊಟ್ಟ ತಂಗಿ ಸೇರಿದಂತೆ 35ಕ್ಕೂ ಆಧಿಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist