Untitled Document
Sign Up | Login    
Dynamic website and Portals
  
October 18, 2015

ದೆಹಲಿಯಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಸಂವಾದ

ನವದೆಹಲಿ : ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 28ರಂದು ಐಐಟಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಭಾರತೀಯರೊಂದಿಗೆ ಬಹಿರಂಗ ಸಂವಾದ ನಡೆಸಲಿದ್ದಾರೆ.

ಭಾರತದಲ್ಲಿ 13 ಕೋಟಿ ಜನ ಫೇಸ್‌ಬುಕ್‌ ಬಳಸುತ್ತಾರೆ. ಭಾರತೀಯರನ್ನು ನಾನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ಅಕ್ಟೋಬರ್‌ 28ಕ್ಕೆ ದೆಹಲಿ ಐಐಟಿಯಲ್ಲಿ ಬಹಿರಂಗ ಸಂವಾದ ನಡೆಸಲಿದ್ದೇನೆ ಎಂದು ಜುಕರ್‌ಬರ್ಗ್‌ ತಮ್ಮ ಫೇಸ್‌ಬುಕ್‌ನಲ್ಲಿ ಪುಟದಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ಪ್ರಶ್ನೆಗಳೇನೇ ಇದ್ದರೂ ನನ್ನ ಈ ಹೇಳಿಕೆಯ ಕೆಳಗಿರುವ ಕಮೆಂಟ್‌ ವಿಭಾಗದಲ್ಲಿ ಬರೆಯಿರಿ. ಪ್ರಶ್ನೆ ನಿಮಗೆ ಹಿಡಿಸಿದ್ದರೆ ಲೈಕ್‌ ಮಾಡಿ. ಐಐಟಿ ದೆಹಲಿ ಸಂವಾದದಲ್ಲಿ ನೇರವಾಗಿ ಸಭಿಕರ ಪ್ರಶ್ನೆಗ ಉತ್ತರಿಸುತ್ತೇನೆ. ಫೇಸ್‌ಬುಕ್‌ನಲ್ಲಿ ನನಗೆ ಕೇಳಿರುವ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ, ಎಂದು ಮಾರ್ಕ್‌ ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಸಿಲಿಕಾನ್‌ ವ್ಯಾಲಿಯ ಫೇಸ್‌ಬುಕ್‌ ಮುಖ್ಯ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Share this page : 
 

Table 'bangalorewaves.bv_news_comments' doesn't exist