Untitled Document
Sign Up | Login    
Dynamic website and Portals
  
October 14, 2015

ಬುಧವಾರ ಔಷಧ ಅಂಗಡಿ ಬಂದ್

ನವದೆಹಲಿ : ಆನ್‌ಲೈನ್‌ ನಲ್ಲಿ ಔಷಧ ಮಾರಾಟ ವಿರೋಧಿಸಿ ಅಕ್ಟೋಬರ್‌ 14ರ ಬುಧವಾರ ದೇಶದಾದ್ಯಂತ ಔಷಧ ಅಂಗಡಿ ಬಂದ್‌ ನಡೆಯಲಿದೆ.

ಡ್ರಗ್ಸ್‌ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆಯ ಪ್ರಕಾರ, ವೈದ್ಯರ ಸಲಹಾ ಚೀಟಿ ಮೂಲಕ ಅರ್ಹ ವ್ಯಕ್ತಿ ಮಾತ್ರ ಔಷಧ ಮಾರಾಟ ಮಾಡಬಹುದು ಎಂದು ಹೇಳುತ್ತದೆ. ಆದರೆ, ಇದೀಗ ಈ ನಿಯಮ ಉಲ್ಲಂಘಿಸಿ ಕೇಂದ್ರ ಸರ್ಕಾರವು ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌ ಮತ್ತು ಅಮೆಜಾನ್‌ನಂಥ ಆನ್‌ಲೈನ್‌ ತಾಣಗಳ ಮೂಲಕ ಔಷಧ ಮಾರಾಟಕ್ಕೆ ಅನುಮತಿ ನೀಡುತ್ತಿದೆ. ಇದರಿಂದ 60 ಲಕ್ಷ ಮಂದಿ ಔಷಧ ವ್ಯಾಪಾರಿಗಳು ಬೀದಿಗೆ ಬೀಳಲಿದ್ದಾರೆ. ಅಲ್ಲದೆ, ವೈದ್ಯರ ಶಿಫಾರಸಿಲ್ಲದ ಅಕ್ರಮ ಔಷಧಿಗಳು ಆನ್‌ಲೈನ್‌ ಮೂಲಕ ಜನರ ಕೈಸೇರುವ ಸಾಧ್ಯತೆ ಇದೆ ಎಂದು ಔಷಧ ವ್ಯಾಪಾರಿಗಳು ದೂರಿದ್ದಾರೆ.

ಅಕ್ಟೋಬರ್‌ 13ರ ಮಧ್ಯರಾತ್ರಿ 12 ಗಂಟೆಯಿಂದಲೇ ಬಂದ್‌ ಆರಂಭವಾಗಿದ್ದು, ಅಕ್ಟೋಬರ್‌ 14ರ ಮಧ್ಯರಾತ್ರಿ 12 ಗಂಟೆವರೆಗೆ 24 ಗಂಟೆಗಳ ಕಾಲ ಔಷಧಾಲಯಗಳು ಬಂದ್‌ ಇರಲಿವೆ. ಆದರೆ, ತುರ್ತು ಔಷಧಕ್ಕೆ ಸಮಸ್ಯೆಯಾಗದಂತೆ ಆಸ್ಪತ್ರೆಗಳ ಒಳಾಂಗಣದಲ್ಲಿರುವ ಔಷಧಾಲಯಗಳಲ್ಲಿ ಮಾತ್ರ ಮಾರಾಟ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Protest

ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ಬೃಹತ್ ಪ್ರತಿಭಟನೆ ಅರಂಭಿಸಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
  • ದೇಶವ್ಯಾಪಿ ಪೆಟ್ರೋಲ್ ಬಂಕ್ ಮುಷ್ಕರ ವಾಪಸ್
  • ಸಿಪಿಎಂ ಕಛೇರಿಗೆ ಮುತ್ತಿಗೆ: ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರ ಬಂಧನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited