ನವದೆಹಲಿ : ಶಶಾಂಕ್ ಮನೋಹರ್ ಭಾನುವಾರ ಬಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 58ರ ಶಶಾಂಕ್ ಮನೋಹರ್ ಎರಡನೇ ಬಾರಿಗೆ ಬಿಸಿಸಿಐ ನ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಿದೆ.
ಜಗಮೋಹನ್ ದಾಲ್ಮಿಯಾ ಅವರು ನಿಧನ ದಿಂದ ತೆರವಾಗಿದ್ದ ಬಿಸಿಸಿಐಯ ಅಧ್ಯಕ್ಷ ಹುದ್ದೆಗೆ ಭಾನುವಾರ ನಡೆದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯ ವಿಶೇಷ ಮಹಾಸಭೆಯಲ್ಲಿ ಶಶಾಂಕ್ ಮನೋಹರ್ ಬಿಸಿಸಿಐಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವುದು ಮತ್ತು ಕ್ರಿಕೆಟ್ ಅಭಿಮಾನಿಗಳ ನಂಬಿಕೆಯನ್ನು ಮರುಸ್ಥಾಪನೆ ಮಾಡುವುದು ತಮ್ಮ ಮೊದಲ ಆದ್ಯತೆ ಎಂದು ಮನೋಹರ್ ತಿಳಿಸಿದ್ದಾರೆ.
ಮಂಡಳಿಯಿಂದ ಯಾವುದೇ ತಪ್ಪು ನಡೆಸಿಲ್ಲ. ಮಾಹಿತಿಯನ್ನು ಕೊಡದ ಕಾರಣ ಜನರಲ್ಲಿ ಮಂಡಳಿಯಲ್ಲಿ ಏನೋ ತಪ್ಪು ನಡೆದಿದೆ ಎನ್ನುವ ಅಭಿಪ್ರಾಯವಿದೆ. ಮಂಡಳಿ ಶೀಘ್ರದಲ್ಲಿ ಲೆಕ್ಕ ಪತ್ರ, ಖರ್ಚು ವೆಚ್ಚಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ ಎಂದು ಮನೋಹರ್ ಹೇಳಿದರು.