Untitled Document
Sign Up | Login    
Dynamic website and Portals
  
September 29, 2015

ಆರ್ ಬಿ ಐ ನಿಂದ ಬಡ್ಡಿ ದರ ಕಡಿತ

ನವದೆಹಲಿ : ಆರ್ಥಿಕತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್​ಬಿಐ ಮಂಗಳವಾರ ರೆಪೊ ದರದಲ್ಲಿ 0.5% ಇಳಿಕೆ ಮಾಡಿದೆ. ಆರ್​ಬಿಐ ಇದೀಗ 7.25% ದಿಂದ 6.75% ಕ್ಕೆ ಇಳಿಕೆ ಮಾಡಿದ್ದು, ಇದರಿಂದ ಗೃಹಸಾಲಕ್ಕೆ ಉತ್ತೇಜನ ಸಿಗಲಿದೆ. ಈ ವರ್ಷವೇ 4 ಸಲ ರೆಪೊ ದರ ಇಳಿಕೆ ಮಾಡಿದ್ದು, ಒಟ್ಟು 1.25% ಇಳಿಕೆಯಾಗಿದೆ. ರೆಪೊ ದರ ಕಳೆದ 4 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಷೇರು ಮಾರುಕಟ್ಟೆಯಲ್ಲಾದ ಚೇತರಿಕೆಯನ್ನರಿತು ರೆಫೋ ದರವನ್ನು ಕಡಿಮೆ ಮಾಡಿರುವುದಾಗಿ ಆರ್​ಬಿಐ ಹೇಳಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಬಿಐ ಮುಖ್ಯಸ್ಥ ರಘುರಾಮ್ ರಾಜನ್, ಮಾರುಕಟ್ಟೆಯಲ್ಲಾಗಿರುವ ದಿಢೀರ್ ಚೇತರಿಕೆ ಹಿನ್ನೆಲೆಯಲ್ಲಿ ಆರ್​ಬಿಐ ಈ ಕ್ರಮ ತೆಗೆದುಕೊಂಡಿದೆ. ಇದರಿಂದ ಆರ್ಥಿಕ ಸುಧಾರಣೆ ಅನುಕೂಲವಾಗಲಿದೆ. ವರ್ಷದಲ್ಲಿಯೇ ನಾಲ್ಕನೇ ಬಾರಿಗೆ ರೆಪೋದರ ಇಳಿಸಲಾಗುತ್ತಿದೆ ಎಂದು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited