Untitled Document
Sign Up | Login    
Dynamic website and Portals
  
September 28, 2015

21 ನೇ ಶತಮಾನ ಭಾರತಕ್ಕೆ ಸೇರಿದ್ದು: ಪ್ರಧಾನಿ ನರೇಂದ್ರ ಮೋದಿ

ಸ್ಯಾಪ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಯಾಪ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಕ್ಯಾಲಿಫೋರ್ನಿಯಾ : ಪ್ರಧಾನಿ ನರೇಂದ್ರ ಮೋದಿ ಅವರು ಸ್ಯಾನ್ ಜೋಸ್ ನ ಸ್ಯಾಪ್ ಸೆಂಟರ್ ನಲ್ಲಿ ಭಾರತೀಯ ಸಮುದಾಯದ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖಾಂಶಗಳುಃ

* ಇಲ್ಲಿ ಇಂದು ಸೆ. 27 ಆದರೆ ಭಾರತದಲ್ಲಿ ಸೆ. 28. ಸೆ. 28 ಭಗತ್ ಸಿಂಗ್ ಅವರ ಜನ್ಮದಿನ. ನಾನು ಹುತಾತ್ಮರಾದ ಭಾರತಮಾತೆಯ ಅಚ್ಚುಮೆಚ್ಚಿನ ಮಗನಿಗೆ ನಮಸ್ಕರಿಸುತ್ತೇನೆ. ತಾವೆಲ್ಲರೂ ವೀರ ಭಗತ್ ಸಿಂಗ್ ಅಮರರಾಗಿರಲಿ ಎಂಬ ಘೋಷಣೆಯನ್ನು ಮಾಡಿ.

* ನಾನು ಕಳೆದ 3 ದಿನಗಳಿಂದ ನಿಮ್ಮ ದೇಶದಲ್ಲಿ ಸುತ್ತಾಡುತ್ತಿದ್ದೇನೆ. ಬಹಳಷ್ಟು ಜನರನ್ನು ಭೇಟಿ ಮಾಡಿದ್ದೇನೆ.

* ಕಳೆದ ಸೆಪ್ಟೆಂಬರ್ ನಲ್ಲಿ ನಾನು ಯುಎನ್ ಶೃಂಗಸಭೆಯಲ್ಲಿ ಭಾಗವಹಿಸಲು ಬಂದಿದ್ದೆ. ಆಗ ಮ್ಯಾಡಿಸನ್ ಸ್ಕೇರ್ ನಲ್ಲಿ ಭಾರತೀಯರನ್ನು ಭೇಟಿ ಮಾಡಿದ್ದೆ. ಒಂದು ವರ್ಷದ ನಂತರ ನಿಮ್ಮನ್ನೆಲ್ಲ ಇಲ್ಲಿ ನೋಡುವ ಅವಕಾಶ ದೊರೆಯಿತು. ಭಾರತದ ರೋಮಾಂಚಕ ಚಿತ್ರದ ಪ್ರತಿಬಿಂಬವನ್ನು ನಾನು ಕ್ಯಾಲಿಫೋರ್ನಿಯಾದಲ್ಲಿ ಕಾಣುತ್ತಿದ್ದೇನೆ.

* ನಾನು ಭೇಟಿ ಮಾಡಿದ ಪ್ರತಿಯೊಬ್ಬರ ಮುಖದಲ್ಲಿ ಕಾಂತಿ ಇದೆ,ಕಣ್ಣಿನಲ್ಲಿ ಕನಸಿದೆ ಮತ್ತು ಏನಾದರೂ ಮಾಡಬೇಕೆಂಬ ಮನಸ್ಸಿದೆ. ಇನ್ನೊಂದು ದೊಡ್ಡ ವಿಷಯವೆಂದರೆ, ಅಮೆರಿಕಾದ ನಾಗರಿಕರಿಗೆ ಭಾರತೀಯ ಮೂಲದವರ ಮೇಲೆ ಹೆಮ್ಮೆ ಇದೆ. ಇದಕ್ಕೆ ನಾನು ನಿಮಗೆ ಅಭಿನಂದನೆ ತಿಳಿಸುತ್ತೇನೆ. ನಿಮಗೆ ನಮಸ್ಕರಿಸುತ್ತೇನೆ.

* ಇಡೀ ಪ್ರಪಂಚದಲ್ಲಿ ಇಂದು ಭಾರತ ಬಗ್ಗೆ ಹೊಸ ಚಿತ್ರಣ, ಹೊಸ ಗುರುತು ಇದೆ. ಜಗತ್ತು ಭಾರತದ ಬಗ್ಗೆ ಇದ್ದ ಗ್ರಹಿಕೆಯನ್ನು ಬದಲಾಯಿಸಲೇ ಬೇಕಾದ ಕಾಲ ಬಂದಿದೆ. ಇದಕ್ಕೆ ಕಾರಣ ನಿಮ್ಮ ಬೆರಳುಗಳಲ್ಲಿರುವ ಮಾಂತ್ರಿಕ ಶಕ್ತಿ. ಕೀಬೋರ್ಡ್ ಮೇಲಿನ ನಿಮ್ಮ ಕೈಬೆರಳುಗಳಿಂದ ಭಾರತದ ಗುರುತನ್ನು ಬದಲಾಯಿಸಿದ್ದೀರಿ. ಇಲ್ಲಿ ಕುಳಿತು ಜಗತ್ತು ಬದಲಾಗುವಂತೆ ಒತ್ತಾಯಿಸಿದ್ದೀರಿ.

* ನಾನು ದೆಹಲಿಗೆ ಬಂದು 16 ತಿಂಗಳಾಯಿತು. 16 ತಿಂಗಳ ಹಿಂದೆ ಅವರಿಚಿತನಾಗಿ ಬಂದೆ. ನಾನು ಸಂಸತ್ತಿಗೆ ಹೋಗಲು ಸಹಾಯ ಕೇಳಬೇಕಾಗಿತ್ತು. 125 ಕೋಟಿ ಜನರು ನನಗೆ ಜವಬ್ದಾರಿ ಕೊಟ್ಟರು. ಅದನ್ನು ಪೂರ್ಣ ಮಾಡಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ.

* ಜಗತ್ತಿನ ಎಲ್ಲಾ ಕಡೆಯಲ್ಲೂ ಭಾರತದ ಬಗ್ಗೆ ಭರವಸೆ ಮತ್ತು ಆಶಾಭಾವವಿದೆ. 21 ನೇ ಶತಮಾನ ಏಷಿಯಾದ್ದು ಎಂದು ಎಲ್ಲಾರಿಗೂ ಗೊತ್ತು. ಆದರೆ ಈಗ ಕೆಲವು ಸಮಯದಿಂದ 21 ನೇ ಶತಮಾನ ಭಾರತದ್ದು ಎಂದು ಜಗತ್ತು ಒಪ್ಪಿದೆ. ಹೇಗೆ ಈ ರೀತಿಯ ಬದಲಾವಣೆಯಯಿತು?

* ಈ ಬದಲಾವಣೆ 125 ಕೋಟಿ ಭಾರತೀಯರ ನಿರ್ಧಾರದಿಂದ ಸಾಧ್ಯವಾಯಿತು. ಯಾವಾಗ ಜನರು ನಿರ್ಧಾರ ಮಾಡುತ್ತಾರೆ ಆಗ ದೇವರ ಆಶೀರ್ವಾದ ದೊರೆಯುತ್ತದೆ.

* ಒಂದು ಕಾಲದಲ್ಲಿ ಭಾರತವನ್ನು ಅಣುಕಿಸುತ್ತಿದ್ದವರು ಈಗ ಭಾರತವನ್ನು ಕೇಂದ್ರ ಬಿಂದುವಾಗಿ ನೋಡುತ್ತಾರೆ. ಈಗ ಎಲ್ಲರೂ ಭಾರತದ ಜೊತೆ ಸೇರಲು ಬಯಸುತ್ತಾರೆ. ಈ ಭರವಸೆಯ ಹೊಸ ವಾತಾವರಣ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

* ನೀವು ನಮಗೆ ಎನ್ನನ್ನೂ ಅಡಗಿಸಲಾಗದ ತಂತ್ರಜ್ನಾನವನ್ನು ನೀಡಿದ್ದೀರಿ. ಎಲ್ಲಿ ಏನೇ ಆದರು ನಿಮ್ಮ ಮೊಬೈಲ್ ಅಲ್ಲಿ ನಿಮಗೆ ಸುದ್ದಿ ಬರುತ್ತದೆ. ನಿಮಗೆ ಭಾರತ ಆಗುಹೋಗಿನ ಬಗ್ಗೆ ಮಾಹಿತಿ ಇರುತ್ತದೆ. ಮೋದಿ ಏನು ಹೇಳಿದರು, ಮಾಡುತ್ತಿದ್ದಾರೆ, ಮಾಡುತ್ತಾರೆ ಎನ್ನುವುದೂ ನಿಮಗೆ ತಿಳಿಯುತ್ತದೆ.

* ನಾನು 125 ಕೋಟಿ ಭಾರತೀಯರು ಕೊಟ್ಟ ಪ್ರತಿ ಜವಬ್ದಾರಿಯನ್ನು ಪೂರ್ಣಗೊಳಿಸುತ್ತೇನೆ. ಅದಕ್ಕಾಗಿ ನನ್ನ ಜೀವನದ ಪ್ರತಿಕ್ಷಣವನ್ನೂ ಮುಡಿಪಾಗಿಡುತ್ತೇನೆ.

* ಇಂದು 16 ತಿಂಗಳ ನಂತರ ನಿಮ್ಮ ಪ್ರಮಾಣ ಪತ್ರ ಬೇಕು. ನಾನು ಕೊಟ್ಟ ಭರವಸೆಗಳನ್ನು ಉಳಿಸಿಕೊಂಡಿದ್ದೇನೆಯೇ? ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆಯೇ? ಹೌದು ಸೇಹಿತರೇ, ನಾನು ನನ್ನ ಜವಬ್ದಾರಿಯನ್ನು ನಿರ್ವಹಿಸಲು ಸಂಪೂರ್ಣ ಪ್ರಯತ್ನಪಡುತ್ತಿದ್ದೇನೆ.

* ನಮ್ಮ ದೇಶದಲ್ಲಿ ರಾಜಕಾರಣಿಗಳ ಮೇಲೆ ಆರೋಪ ಬರಲು ಬಹಳ ದಿನ ಬೇಕಾಗುವುದಿಲ್ಲ. ಆ ವ್ಯಕ್ತಿ 50 ಕೋಟಿ ರೂ ಮಾಡಿದ, ಮಗ 250 ಕೋಟಿ ರೂ ಮಾಡಿದ, ಮಗಳು 500 ಕೋಟಿ ರೂ ಮಾಡಿದಳು, ಅಳಿಯ 1000 ಕೋಟಿ ರೂ ಮಾಡಿದ ಎನ್ನುವ ಮಾತುಗಳನ್ನು ಕೇಳುತ್ತೇವೆ. ಈ ಮಾತುಗಳನ್ನು ಕೇಳಿ ನಿಮಗೆ ಸಾಕಾಗಿದೆಯಲ್ಲವೇ? ನಿಮಗೆ ಕೋಪ ಬಂದಿದೆಯಲ್ಲವೇ?

* ನಾನು ನಿಮ್ಮ ಮಧ್ಯೆ ನಿಂತಿದ್ದೇನೆ. ಹೇಳಿ, ನನ್ನ ಮೇಲೆ ಯಾವುದೇ ಆರೋಪವಿದೆಯೇ? ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ ಸಭಿಕರು ಇಲ್ಲ ಎಂದು ಹೇಳಿದರು.

* ಪ್ರಪಂಚ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಭಯೋತ್ಪಾದನೆ ಮತ್ತು ಜಾಗತಿಕ ತಾಪಮಾನ ಪ್ರಮುಖವಾದುದು.

* ಭಯೋತ್ಪಾದನೆಯಲ್ಲಿ ಉತ್ತಮ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎನ್ನುವುದಿಲ್ಲ. ಯಾವುದೇ ಆದರೂ ಅದು ಭಯೋತ್ಪಾದನೆಯೇ ಸರಿ. ಯುಎನ್ ನಲ್ಲಿ ಇನ್ನೂ ಭಯೋತ್ಪಾದನೆಗೆ ಸರಿಯಾದ ವ್ಯಾಖ್ಯಾನ ಇಲ್ಲ. ಭಯೋತ್ಪಾದನೆಯ ವ್ಯಾಖ್ಯಾನನಕ್ಕೇ 15 ವರ್ಷ ತೆಗೆದುಕೊಂಡರೆ, ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಇನ್ನೆಷ್ಟು ವರ್ಷ ಬೇಕುಗಬಹುದು. ಭಾರತ ಕಳೆದ ೪೦ ವರ್ಷಗಳಿಂದ ಭಯೋತ್ಪಾದನೆಯ ದಾಳಿಗೆ ಗುರಿಯಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ಮಾನವ ಶಕ್ತಿಗಳೂ ಒಂದಾಗಬೇಕು. ಎಲ್ಲರಲ್ಲೂ ಒಗ್ಗಟ್ಟಿರಬೇಕು. ಆಗ ಮಾತ್ರ ಪ್ರಪಂಚದಲ್ಲಿ ಶಾಂತಿ ನೆಲೆಸಲು ಸಾಧ್ಯ.

* ಜಾಮ್ (JAM) ನಮ್ಮ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.
J - ಜನ್ ಧನ್ ಬ್ಯಾಂಕ್ ಖಾತೆ
A - ಆಧಾರ್ ಕಾರ್ಡ್
M - ಮೊಬೈಲ್ ಆಡಳಿತ

* 50 ವರ್ಷಗಳ ಹಿಂದೆಯೇ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಲಾಗಿತ್ತು. ಆದರೆ ಅದು ಬಡವರ ಸಹಾಯಕ್ಕೆ ಆಗಲಿಲ್ಲ. ಆದರೆ ಈಗ ಜನ್ ಧನ್ ಯೋಜನೆಯಡಿಯಲ್ಲಿ 18 ಕೋಟಿ ಹೊಸ ಖಾತೆ ತೆರೆದುಕೊಂಡಿದೆ. ನಾವು ಶ್ರೀಮಂತರ ಬಡತನದ ಬಗ್ಗೆ ಕೇಳಿದ್ದೆವು ಆದರೆ ಬಡವರ ಆಸ್ತಿಯನ್ನು ನೋಡಿರಲಿಲ್ಲ. ಈ ಯೋಜನೆಯಲ್ಲಿ 32 ಕೋಟಿ ರೂ ಜಮಾ ಆಗಿದೆ.

* ಎಲ್ ಪಿ ಜಿ ಸಬ್ಸಿಡಿಯನ್ನು ನೇರವಾಗಿ ಈಗ ಗ್ರಾಹಕನ ಬ್ಯಾಂಕ್ ಖಾತೆಗೆ ವರ್ಗಾಹಿಸಲಾಗಿತ್ತದೆ. ಇದಕ್ಕೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಲಾಗಿದೆ. ಇದರಿಂದ ಸರ್ಕಾರದ ಬುಗ್ಗಸಕ್ಕೆ ಕೋಟ್ಯಾಂತರ ರೂ ಉಳಿತಾಯವಾಗುತ್ತಿದೆ.

* ಮೊಬೈಲ್ ಆಡಳಿತ ವ್ಯವಸ್ಥೆಯಿಂದ ಜನರು ತಮ್ಮ ತಮ್ಮ ಮೊಬೈಲ್ ಮೂಲಕ ವ್ಯವಹರಿಸಬಹುದು.

* ನಾನು ಈವರೆಗೆ ಹೇಳಿದ್ದೆಲ್ಲ ಕೇವಲ ಕೆಲವು ತುಣುಕುಗಳು ಮಾತ್ರ್. ಸಂಪೂರ್ಣವಾಗಿ ವಿವರಿಸಲು ದಿನ 2 ತಾಸು ಹೇಳಿದರೂ 15 ದಿನ ಬೇಕಾಗಬಹುದು. ಆಷ್ಟು ವಿಷಯಗಳಿವೆ.

* ಭಾರತ್ ಮಾತಾ ಕೀ... ಜೈ...

* ವೀರ ಭಗತ್ ಸಿಂಗ್... ಅಮರರಾಗಿರಲಿ...

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited