ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಯುಎಸ್ ಪ್ರವಾಸಕ್ಕೂ ಮೊದಲು ಮಂಗಳವಾರ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಅಮೇರಿಕಾದ ವಿಮಾನಯಾನ ದ್ಯೈತ್ಯ, ಬೋಯಿಂಗ್ ಜೊತೆ ಹಲವು ಬಿಲಿಯನ್ ಡಾಲರ್ ಮೊತ್ತದ ಸೇನಾ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದೆ.
ಸುಮಾರು 3.1 ಬಿಲಿಯನ್ ಡಾಲರ್ ಮೊತ್ತದ ಅಪಾಚೆ ಮತ್ತು ಚಿನೂಕ್ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಒಪ್ಪಿಗೆ ದೊರೆಕಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಹೊಸ 22 ಅಪಾಚೆ ಅಟ್ಯಾಕ್ ಮತ್ತು 15 ಹೆವಿ ಲಿಫ್ಟ್ ಚಿನೂಕ್ ಹೆಲಿಕ್ಯಾಪ್ಟರ್ ಗಳು ಹಳೆಯ ಸೋವಿಯತ್ ಮೂಲದ ಹೆಲಿಕ್ಯಾಪ್ಟರ್ ಗಳನ್ನು ಬದಲಿಸಲಿವೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಪ್ರವಾಸಕ್ಕೆ ಹೊರಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಿಲಿಕಾನ್ ವ್ಯಾಲಿಗೆ ಭೇಟಿ ನೀಡುವ ಮೊದಲು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯುಎಸ್ ಗೆ ಮೊದಲ ಮಿಲಿಟರಿ ಒಪ್ಪಂದ ಇದಾಗಿದೆ.