Untitled Document
Sign Up | Login    
Dynamic website and Portals
  
September 14, 2015

ತೆರಿಗೆದಾರರಿಗೆ ಇನ್ನು ಮುಂದೆ 7-10 ದಿನಗಳಲ್ಲಿ ತೆರಿಗೆ ಮರುಪಾವತಿ

ನವದೆಹಲಿ : ತೆರಿಗೆದಾರರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಅದಾಯ ತೆರಿಗೆ ಇಲಾಖೆ ತೆರಿಗೆದಾರರ ತೆರಿಗೆ ಮರುಪಾವತಿ (ರಿಫಂಡ್) ಮೊತ್ತವನ್ನು 7-10 ದಿನಗಳ ಅಲ್ಪಾವಧಿಯಲ್ಲಿ ಹಿಂದಿರುಗಿಸುತ್ತದೆ. ಇತ್ತೀಚಿಗೆ ಇಲಾಖೆ ವಿದ್ಯುನ್ಮಾನ ಮತ್ತು ಆಧಾರ್ ಆಧಾರಿತ ಐಟಿಆರ್ ಪರಿಶೀಲನೆ ವ್ಯವಸ್ಥೆಯಲ್ಲಿ ಸುಧಾರಣೆ ತಂದ ಹಿನ್ನಲೆಯಲ್ಲಿ ಇನ್ನು ಮುಂದೆ ರೆರಿಗೆ ಮರುಪಾವತಿ 7-10 ದಿನಗಳಲ್ಲಿ ಆಗಲಿದೆ.

ಆದಾಯ ತೆರಿಗೆ ರಿಟರ್ನ್ ಅನ್ನು ಆಧಾರ್ ಅಥವಾ ಬ್ಯಾಂಕ್ ಡೇಟಾಬೇಸ್ ಮೂಲಕ ಪರಿಶೀಲನೆ ನಡೆಸುವ ಆದಾಯ ತೆರಿಗೆಯ ಇತ್ತೀಚಿನ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಿಂದ 2015-16 ನೇ ಸಾಲಿನ ತೆರಿಗೆ ಮರುಪಾವತಿಯನ್ನು ಇಲಾಖೆ 15 ದಿನಗಳ ಒಳಗೆ ಅರ್ಹ ತೆರಿಗೆದಾರರ ಬ್ಯಾಂಕ್ ಖಾತೆಗೆ ವರ್ಗಾಹಿಸಲು ಸಾಧ್ಯವಾಗಿದೆ.

ಮೊದಲೆಲ್ಲ ತೆರಿಗೆ ಮರುಪಾವತಿ ಹಣಕ್ಕಾಗಿ ಕೆಲವು ದಿನಗಳು ಅಥವಾ ವರ್ಷಗಳೇ ಕಾಯಬೇಕಿತ್ತು. ಅದರೆ ಈಗಿನ ವಿದ್ಯುನ್ಮಾನ ಪರಿಶೀಲನೆಯ ಇ- ಫೈಲಿಂಗ್ ವ್ಯವಸ್ಥೆ ಗ್ರಾಹಕ ಸ್ನೇಹಿಯಾಗಿದ್ದು, ಇಲಾಖೆ ತೆರಿಗೆದಾರರಿಗೆ ಒಂದು ವಾರ ಅಥವಾ ಗರಿಷ್ಠ ಹತ್ತು ದಿನಗಳಲ್ಲಿ ತೆರಿಗೆ ಮರುಪಾವತಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited