Untitled Document
Sign Up | Login    
Dynamic website and Portals
  
September 12, 2015

ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್; ಇಬ್ಬರ ಸಾವು, ಎಂಟು ಜನರಿಗೆ ಗಾಯ

ಕಲಬುರಗಿ : ಶನಿವಾರ ಮುಂಜಾನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಮರತೂರ ಎಂಬಲ್ಲಿ ದುರಂತೋ ಎಕ್ಸ್ ಪ್ರೆಸ್ ನ ಸುಮಾರು 8 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಮರಣ ಹೊಂದಿದ್ದು, ಎಂಟು ಜನರಿಗೆ ಗಾಯಗಳಾಗಿವೆ.

ಕಲಬುರಗಿಯಿಂದ 20 ಕಿ.ಮಿ. ದೂರದಲ್ಲಿರುವ ಮರತೂರು ರೈಲ್ವೇ ನಿಲ್ದಾಣದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು ಎಂಟು ಜನರಿಗೆ ಗಾಯಗಳಾಗಿವೆ. ಬೆಳಗಿನ ಜಾವ 2:15 ರಿಂದ್ 2:20 ರ ಮಧ್ಯೆ 9 ಬೋಗಿಗಳು ಹಳಿತಪ್ಪಿವೆ ಎಂದು ಕಲಬುರಗಿ ಎಸ್ ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು ಗಾಯಾಳುಗಳನ್ನು ಸಮೀಪದ ಸೊಲ್ಹಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಹಾಯವಾಣಿ ಸಂಖ್ಯೆಗಳು: ಗುಲ್ಬರ್ಗಾ:0847-2255066/2255067, ಸಿಕಂದರಾಬಾದ್‌: 040-27700968, ಸೊಲ್ಹಾಪುರ: 0217-2313331 ಛತ್ರಪತಿ ಶಿವಾಜಿ ಟರ್ಮಿನಲ್‌: 022-22694040, ಲೋಕಮಾನ್ಯ ತಿಲಕ್‌ ಟರ್ಮಿನಲ್‌: 022-25280005, ಮತ್ತು ಕಲ್ಯಾಣ್‌: 0251-2311499.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited