BW News Bureau : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನ 5 ಗಂಟೆಗೆ ಮುಕ್ತಾಯಗೊಂಡಿದ್ದು, ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುಮಾರು 3 ಗಂಟೆಯ ಸಮಯದಲ್ಲಿ ಕೇವಲ ಶೇ. 30 ರಷ್ಟು ಮತದಾನವಾಗಿದ್ದು, 21 ಲಕ್ಷ 99 ಸಾವಿರದಷ್ಟು ಮಂದಿ ಮತದಾನ ಮಾಡಿದ್ದರು. ಹೆಚ್ಚಾಗಿ ಯಾವುದೇ ಚುನಾವಣೆಯಲ್ಲಾಗಲಿ, ಮತದಾನ ಮುಗಿಯುವ ವೇಳೆಗೆ ಹೆಚ್ಚಿನ ಮತದಾನವಾಗುತ್ತದೆ. ಆದರೆ ಮಳೆ ಬಂದ ಕಾರಣ ಕೊನೆಯ ಕ್ಷಣದ ಮತದಾನಕ್ಕೆ ಆಡ್ಡಿಯಾಯಿತು.
ಬೆಂಗಳೂರಿನ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯರು ತಮ್ಮ ಹಕ್ಕು ಚಲಾಯಿಸಿದರು ಆದರೆ ಯುವಕರು ಮತ್ತು ಮಧ್ಯವಯಸ್ಕರಲ್ಲಿ ಮತದಾನಕ್ಕೆ ನಿರುತ್ಸಾಹ ಕಂಡುಬಂದಿತು.