Untitled Document
Sign Up | Login    
Dynamic website and Portals
  
August 20, 2015

ಶೈಕ್ಷಣಿಕ ಸಾಲ ಪಡೆಯಲು ಕೇಂದ್ರ ಸರ್ಕಾರದಿಂದ ಸುಲಭ ವಿಧಾನ ಜಾರಿ

ಕೃಪೆ ಃ vidyalakshmi.co.in ಕೃಪೆ ಃ vidyalakshmi.co.in

ನವದೆಹಲಿ : ಶೈಕ್ಷಣಿಕ ಸಾಲ ಪಡೆಯಲು ವಿದ್ಯಾರ್ಥಿಗಳಿಗಾಗಿ vidyalakshmi.co.in (ವಿದ್ಯಾಲಕ್ಷ್ಮಿ.ಕೋ.ಇನ್) ಎನ್ನುವ ಜಾಲತಾಣ ಪ್ರಾರಂಭಿಸಿರುವುದಾಗಿ ಗುರುವಾರ ಕೇಂದ್ರ ಸರ್ಕಾರ ತಿಳಿಸಿದೆ. ಎಸ್ ಬಿ ಐ, ಐಡಿಬಿಐ, ಬ್ಯಾಂಕ್ ಆಫ್ ಇಂಡಿಯಾ ಸೇರಿ ಐದು ಬ್ಯಾಂಕ್ ಗಳು ತಮ್ಮ ವ್ಯವಸ್ಥೆಯನ್ನು ಈ ಪೊರ್ಟಲ್ ಜೊತೆ ಸೇರ್ಪಡೆಗೊಳಿಸಿವೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಂದರೆ ಆ. 15 ರಂದು ಶೈಕ್ಷಣಿಕ ಸಾಲ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳಿಗಾಗಿ ರಂದು ವಿದ್ಯಾ ಲಕ್ಷ್ಮಿ (vidyalakshmi.co. in) ಎಂಬ ಜಾಲತಾಣವನ್ನು ಲೋಕಾರ್ಪಣೆಗೊಳಿಸಲಾಯಿತು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಪೋರ್ಟಲ್ ಅನ್ನು ಎನ್ ಎಸ್ ಡಿ ಎಲ್ ಅಭಿವೃದ್ಧಿಪಡಿಸಿದೆ. ಇದರ ನಿರ್ವಹಣೆಯನ್ನೂ ಎಸ್ ಎಸ್ ಡಿ ಎಲ್ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳು ವಿಭಾಗ, ಉನ್ನತ ಶಿಕ್ಷಣ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಭಾರತೀಯ ಬ್ಯಾಂಕ್ ಗಳ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಮಾಡಲಿದೆ.

ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಸಾಲ ಆಡಳಿತ ಮತ್ತು ಮೇಲ್ವಿಚಾರಣೆಗಾಗಿ ಸಂಪೂರ್ಣ ಐಟಿ ಆಧಾರಿತ ವಿದ್ಯಾರ್ಥಿ ಆರ್ಥಿಕ ನೆರವು ಪ್ರಾಧಿಕಾರ ರಚನೆಯ ಬಗ್ಗೆ 2015-16 ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಸ್ತಾಪಿಸಿದ್ದರು.

ಯಾವುದೇ ವಿದ್ಯಾರ್ಥಿಗಳೂ, ತಮ್ಮ ಆರ್ಥಿಕ ಕೊರತೆಯ ಕಾರಣ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ಇದರ ಉದ್ದೇಶ. ಈ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾ ಲಕ್ಷ್ಮಿ ಯೋಜನೆ ಒಂದೇ ಕಡೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಪೋರ್ಟಲ್ ಆಗಿದ್ದು, ವಿದ್ಯಾರ್ಥಿಗಳು ಬ್ಯಾಂಕ್ ಗಳು ನೀಡುವ ಶೈಕ್ಷಣಿಕ ಸಾಲ ಮತ್ತು ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಸಾಲ ಯೋಜನೆ ಬಗ್ಗೆ ಮಾಹಿತಿ, ಶೈಕ್ಷಣಿಕ ಸಾಲ ಪಡೆಯಲು ಅರ್ಜಿ, ಅನೇಕ ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ, ವಿದ್ಯಾರ್ಥಿಗಳ ಸಾಲದ ಅರ್ಜಿಯನ್ನು ಡೌನ್ ಲೋಡ್ ಮಾಡಲು ಬ್ಯಾಂಕ್ ಗಳಿಗೆ ಅವಕಾಶ ಮುಂತಾದ ವ್ಯವಸ್ಥೆಗಳನ್ನು ಈ ಪೋರ್ಟಲ್ ನಲ್ಲಿ ನೀಡಲಾಗಿದೆ.

ಬ್ಯಾಂಕ್ ಗಳು ಸಾಲ ಅರ್ಜಿಗಳ ಪ್ರಕ್ರಿಯೆಯ ಸ್ಥಿತಿಯನ್ನು ಹಾಕಲು, ವಿದ್ಯಾರ್ಥಿಗಳು ತಮ್ಮ ಕುಂದುಕೊರತೆ ಅಥವಾ ಪ್ರಶ್ನೆಗಳನ್ನು ಹಾಕಲು, ವಿದ್ಯಾರ್ಥಿಗಳು ತಮ್ಮ ಅರ್ಜಿಯ ಸ್ಥಿತಿಗತಿ ತಿಳಿಯಲು ಇಲ್ಲಿ ಅವಕಾಶವಿದೆ. ಇದರಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಗೆ ಲಿಂಕ್ ಕೊಡಲಾಗಿದೆ.

ಈವರೆಗೆ ಒಟ್ಟು 13 ಬ್ಯಾಂಕ್ ಗಳು ಈ ಪೋರ್ಟಲ್ ನಲ್ಲಿ ನೊಂದಾವಣೆ ಮಾಡಿಸಿವೆ ಮತ್ತು 22 ಶೈಕ್ಷಣಿಕ ಸಾಲ ಯೋಜನೆಗಳು ವಿದ್ಯಾ ಲಕ್ಷ್ಮಿ ಪೋರ್ಟಲ್ ನಲ್ಲಿ ಇದೆ. ಎಸ್ ಬಿ ಐ, ಐಡಿಬಿಐ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಇವು 5 ಬ್ಯಾಂಕ್ ಗಳು ತಮ್ಮ ವ್ಯವಸ್ಥೆಯನ್ನು ಈ ಪೋರ್ಟಲ್ ಜೊತೆ ಸೇರಿಸಿ, ವಿದ್ಯಾರ್ಥಿಗಳಿಗೆ ಅವರ ಅರ್ಜಿಯ ಸ್ಥಿತಿಯನ್ನು ನೀಡುತ್ತವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ದೇಶದ ಎಲ್ಲಾ ಬ್ಯಾಂಕ್ ಗಳಲ್ಲಿರುವ ಶೈಕ್ಷಣಿಕ ಸಾಲದ ಮಾಹಿತಿಯ ಒಂದೆಡೆ ಸಿಗುವಂತಹ ಸರ್ಕಾರದ ಈ ಯೋಜನೆಯಿಂದ ದೇಶಾದ್ಯಂತ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited