Untitled Document
Sign Up | Login    
Dynamic website and Portals
  
August 12, 2015

ಇನ್ನು ಮುಂದೆ ವೈಟ್ ಲಿಸ್ಟ್ ಪ್ರಯಾಣಿಕರಿಗೆ ಬದಲಿ ಟ್ರೈನ್

ನವದೆಹಲಿ : ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!. ಪ್ರಯಾಣಕ್ಕೆ ಮುಂಚಿತವಾಗಿ ಬುಕ್ ಮಾಡಿದ ನಿಮ್ಮ ಟಿಕೆಟ್ ಖಚಿತವಾಗದೆ ನಿರೀಕ್ಷಣಾ ಪಟ್ಟಿ (ವೈಟ್ ಲಿಸ್ಟ್) ಯಲ್ಲಿದ್ದರೆ ಕೊನೆ ಘಳಿಗೆಯಲ್ಲಿ ಆತಂಕಪಡಬೇಕಾಗಿಲ್ಲ. ಅಂಥ ಪ್ರಯಾಣಿಕರಿಗೆ ಇನ್ನು ಮುಂದೆ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ರೈಲಿನಲ್ಲಿ ಅದೇ ಟಿಕೆಟ್ ನಲ್ಲಿ ಪ್ರಯಾಣಿಸುವ ಅವಕಾಶವನ್ನು ಕೊಡಲು ರೈಲ್ವೇ ಇಲಾಖೆ ಚಿಂತಿಸುತ್ತಿದೆ.

ಈ ಯೋಜನೆಗೆ ಅನುಮತಿ ದೊರಕಿ ಜಾರಿಗೆ ಬಂದ ಮೇಲೆ ಪ್ರಯಾಣಿಕರಿಗೆ ಇನ್ನೊಂದು ರೈಲಿನಲ್ಲಿ ಪ್ರಯಾಣಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಅವರು ಮೊದಲು ಬುಕ್ ಮಾಡಿದ ಟಿಕೆಟ್/ಬರ್ತ್ ರದ್ದುಪಡಿಸಬೇಕಾಗಿಲ್ಲ. ಬದಲಾಗಿ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಲು ಅದೇ ಟಿಕೆಟ್ ಬಳಸಬಹುದಾಗಿದೆ.

ಈ ಯೋಜನೆಯಿಂಡ ಪ್ರಯಾಣಿಕರಿಗೂ ಅನುಕೂಲವಾಗಲಿದ್ದು ಜೊತೆಗೆ ರೈಲ್ವೇ ಇಲಾಖೆಗೂ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಹೆಚ್ಚಾಗಿ ಒಂದು ಮಾರ್ಗದಲ್ಲಿ ಚಲಿಸುವ ನಿಗದಿತ ರೈಲಿಗೆ ಹೆಚ್ಚಿನ ಬುಕಿಂಗ್ ಇರುತ್ತದೆ. ಇತರ ಕೆಲವು ರೈಲುಗಳಿಗೆ ಬುಕಿಂಗ್ ಕಡಿಮೆ ಇದ್ದು ಬರ್ತ್ ಗಳು ಖಾಲಿ ಇರುವುದರಿಂದ ರೈಲ್ವೇ ಗೆ ಆದಾಯ ಕುಂಠಿತವಾಗುತ್ತದೆ. ಬಹಳ ಮಂದಿ ಪ್ರಯಾಣಿಕರಿಗೆ ಟಿಕೆಟ್ ಖಚಿತವಾಗದೆ ವೈಟ್ ಲಿಸ್ಟ್ ನಲ್ಲಿ ಅವರ ಹೆಸರು ಇರುತ್ತದೆ. ಕೊನೆ ಘಳಿಗೆವರೆಗೂ ಅವರ ಟಿಕೆಟ್ ಖಚಿತವಾಗದಿದ್ದರೆ ಅಂಥ ಪ್ರಯಾಣಿಕರಿಗೆ ಬದಲಿ ಪ್ರಯಾಣ ವ್ಯವಸ್ಥೆ ಮಾಡುವ ಹಾಗೂ ಟಿಕೆಟ್ ರದ್ದುಗೊಳಿಸುವ ಪರದಾಟ ಉಂಟಾಗುತ್ತದೆ.

ಹೊಸ ಯೋಜನೆ ಜಾರಿಗೆ ಬಂದರೆ ಪ್ರಯಾಣಿಕರಿಗೆ ಈ ತಾಪತ್ರಯಗಳು ತಪ್ಪಲಿದ್ದು, ಇಲಾಖೆಗೂ ಆದಾಯ ಹೆಚ್ಚಲಿದೆ ಎಂದು ರೈಲ್ವೇ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Travel & Leisure

ಬೆಂಗಳೂರಿನ ಕೆಐಎನಲ್ಲಿ ದೇಶದ ಮೊದಲ ಆಧಾರ್ ಸಕ್ರಿಯ ವ್ಯವಸ್ಥೆ ಅಳವಡಿಕೆ
  • ಬೆಂಗಳೂರಿನ ಕೆಐಎನಲ್ಲಿ ದೇಶದ ಮೊದಲ ಆಧಾರ್ ಸಕ್ರಿಯ ವ್ಯವಸ್ಥೆ ಅಳವಡಿಕೆ
  • 2018ರ ಅಂತ್ಯದ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಆಧಾರ್ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಿಕೊಳ್ಳವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
  • ಮೈಸೂರು ದಸರಾಕ್ಕೆ ಗೋಲ್ದನ್ ಚಾರಿಯಟ್ ಲಕ್ಸುರಿ ಟ್ರೇನ್
  • ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited