ನವದೆಹಲಿ : ಸೋಮವಾರ ಅಪರಾಹ್ನ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪಕ್ಕೆ ಕಾಶ್ಮೀರ ಕಣಿವೆ ಹಾಗೂ ದೆಹಲಿ ಪ್ರದೇಶಗಳು ಸೇರಿದಂತೆ ಉತ್ತರ ಭಾರತದಲ್ಲೂ ಕಂಪನ ಉಂಟಾಗಿದೆ. ಇವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಅಫ್ಘಾನಿಸ್ತಾನದ ಹಿಂದು ಖುಷ್ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.2 ರಷ್ಟಿತ್ತು ಎಂದು ವರದಿಯಾಗಿದೆ. ಅಪರಾಹ್ನ 3.30ಕ್ಕೆ ಸಂಭವಿಸಿದ ಭೂಕಂಪಕ್ಕೆ ದೆಹಲಿ ಮತ್ತಿತರ ಪ್ರದೇಶಗಳಲ್ಲಿ ಕಟ್ಟಡಗಳು ಅಲುಗಿದ್ದು ಜನರು ಭಯದಿಂದ ಹೊರಗೆ ಓಡಿ ಬಂದರು.
ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್ ಹಾಗೂ ಉತ್ತರದ ಭಾಗಗಳಲ್ಲೂ ಲಘು ಭೂಕಂಪವಾಗಿದೆ ಎಂದು ವರದಿಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.