Untitled Document
Sign Up | Login    
Dynamic website and Portals
  
August 6, 2015

ಲಂಚ ಹಗರಣ: ಗೋವಾದ ಮಾಜಿ ಕಾಂಗ್ರೆಸ್ ಸಚಿವ ಚರ್ಚಿಲ್ ಅಲೆಮಾವೋ ಬಂಧನ

ಪಣಜಿ : ಲೂಯಿಸ್ ಬರ್ಗರ್ ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗೋವಾದ ಮಾಜಿ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮಾವೋ ರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಇತ್ತೀಚೆಗೆ ಬಹಿರಂಗಗೊಂಡ ಅಮೆರಿಕದ ಲೂಯಿಸ್ ಬರ್ಗರ್ ಇಂಟರ್ನ್ಯಾಷನಲ್ ಐಎನ್ಸಿ (ಎಲ್.ಬಿ.ಐ) ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಮಂತ್ರಿ ಅಲೆಮಾವೋ ಪೊಲೀಸ್ ಅತಿಥಿಯಾಗಿದ್ದಾರೆ.

ದಿಗಂಬರ್ ಕಾಮತ್ ನೇತೃತ್ವದ ಕಾಂಗ್ರೆಸ್ ಸರಕಾರದ ಅಧಿಕಾರಾವಧಿಯಲ್ಲಿ ಅಮೆರಿಕದ ಎಲ್.ಬಿ.ಐ ಸಂಸ್ಥೆಯಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಹೊತ್ತಿರುವ ಅಲೆಮಾವೋ ರನ್ನು ಕ್ರೈಂ ಬ್ರಾಂಚ್ ಅಧಿಕಾರಿಗಳು ಬುಧವಾರ ತಡ ರಾತ್ರಿ ಬಂಧಿಸಿದರು. 2010ರಲ್ಲಿ ನೀರು ಸರಬರಾಜು ಮತ್ತು ಚರಂಡಿ ಯೋಜನಗೆ ಸಂಬಂಧಿಸಿದಂತೆ ಅಲೆಮಾವೋ ಲಂಚ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಈ ಯೋಜನೆ ಅಲೆಮಾವೋ ಅವರ ಲೋಕೋಪಯೋಗಿ ಇಲಾಖೆಯಡಿ ಇದ್ದು ಅಲೆಮಾವೋ 2007ರಿಂದ 2012ರವರೆಗೆ ಯೋಜನೆಯ ಉಸ್ತುವಾರಿ ಸಚಿವರಾಗಿದ್ದರು.

ಕ್ರೈಂ ಬ್ರಾಂಚ್ ಎಸ್.ಪಿ ಕಾರ್ತಿಕ್ ಕಶ್ಯಪ್ ಅಲೆಮಾವೋ ಬಂಧನವನ್ನು ಖಚಿತಪಡಿಸಿದ್ದಾರೆ. ಒಂದು ವರದಿಯ ಪ್ರಕಾರ ಅಲೆಮಾಓ ಅವರನ್ನು ಅವರ ವರ್ಕಾ ನಿವಾಸದಿಂದ ಬಂಧಿಸಲಾಯಿತು ಹಾಗೂ ಮತ್ತೊಂದು ವರದಿಯಂತೆ ಅವರನ್ನು ಬುಧವಾರ ಸಂಜೆ ಕ್ರೈಂ ಬ್ರಾಂಚ್ ಕಚೇರಿಗೆ ಬರಲು ಆದೇಶಿಸಲಾಗಿತ್ತು ಹಾಗೂ ಅಲ್ಲಿ ಅವರನ್ನು ಬಂಧಿಸಲಾಯಿತು.

ಮಾಜಿ ಮುಖ್ಯಮಂತ್ರಿ ಕಾಮತ್ ಅವರಿಗೂ ನೊಟೀಸ್ ಜಾರಿಗೊಳಿಸಲಾಗಿದ್ದು, ಮರ್ಗೋವಾ ಶಾಸಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ವಿಶೇಷ ನ್ಯಾಯಾಲಯ ಅವರ ವಿಚಾರಣೆಯನ್ನು ಆಗಸ್ಟ್ 7ರವರೆಗೆ ಮುಂದೂಡಿದೆ.

ಈ ಮಧ್ಯೆ ಅಲೆಮಾವೋ ಬಂಧನ ಸಂಬಂಧ ಗೋವಾವಿಧಾನಸಭೆಯಲ್ಲಿ ಪ್ರತಿಪಕ್ಷದಿಂದ ಗಲಾಟೆಯಾಗುವ ಸಂಭವ ಇರುವುದರಿಂದ ಗೋವಾದ ಬಿಜೆಪಿ ತನ್ನ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದೆ. ಅಸೆಂಬ್ಲಿ ಸುತ್ತ ಮುತ್ತ ಪೊಲೀಸ್ ರಕ್ಷಣೆಯನ್ನು ಬಿಗಿಗೊಳಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited