Untitled Document
Sign Up | Login    
Dynamic website and Portals
  
August 2, 2015

ಖಾತೆ ಬದಲಾವಣೆ : ಆರ್ ವಿ ದೇಶಪಾಂಡೆ ಅವರಿಗೆ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ

ಉನ್ನತ ಶಿಕ್ಷಣ ಹಿಂಪಡೆದು ಕೈಗಾರಿಕಾ ಖಾತೆ

ಖಾತೆ ಬದಲಾವಣೆ : ಆರ್  ವಿ ದೇಶಪಾಂಡೆ ಅವರಿಗೆ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿ ಆರ್‌.ವಿ. ದೇಶಪಾಂಡೆ ಅವರ ಉನ್ನತ ಶಿಕ್ಷಣ ಖಾತೆಯನ್ನು ಹಿಂಪಡೆದು ಆರ್‌.ವಿ.ದೇಶಪಾಂಡೆ ಅವರ ನೆಚ್ಚಿನ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಖಾತೆಯನ್ನು ವಹಿಸಿಕೊಟ್ಟಿದ್ದಾರೆ.

ಶನಿವಾರ ಸಂಜೆ ಈ ನಿರ್ಧಾರ ಮಾಡಿದ್ದು, ಖಾತೆ ಬದಲಾವಣೆ ಕುರಿತು ರಾಜಭವನದಿಂದ ಅಧಿಕೃತ ಆದೇಶವೂ ಹೊರಬಿದ್ದಿದೆ.

ನವೆಂಬರ್‌ 23ರಿಂದ ಬೆಂಗಳೂರು ನಗರದಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್‌ ಕರ್ನಾಟಕವನ್ನು) ಯಶಸ್ವಿಗೊಳಿಸುವ ಉದ್ದೇಶದಿಂದ ದಿಢೀರನೆ ಮುಖ್ಯಮಂತ್ರಿ ಅವರು ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ವೆಸ್ಟ್‌ ಕರ್ನಾಟಕ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ನಿತ್ಯ ಎರಡರಿಂದ ಮೂರು ಸಭೆಗಳನ್ನು ನಡೆಸುವ ಅನಿವಾರ್ಯತೆಯಿದೆ.

ಆದರೆ, ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವುದು ಹಾಗೂ ಇತರೆ ಕಾರ್ಯದೊತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ವೆಸ್ಟ್‌ ಕರ್ನಾಟಕ ಹೂಡಿಕೆದಾರರ ಸಮಾವೇಶಕ್ಕೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಈ ಹಿಂದೆ ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಹಾಗೂ ಕೈಗಾರಿಕಾ ಸಚಿವರಾಗಿದ್ದಾಗಲೇ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದ ಅನುಭವ ಹೊಂದಿರುವ ಆರ್‌.ವಿ. ದೇಶಪಾಂಡೆ ಅವರಿಗೆ ಈ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಖಾತೆ ವಹಿಸಿಕೊಡುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಆರ್‌.ವಿ.ದೇಶಪಾಂಡೆ ಅವರು ಇದುವರೆಗೂ ನಾಲ್ಕು ಮುಖ್ಯಮಂತ್ರಿಗಳ ಅವಧಿಯಲ್ಲಿ ಸುಮಾರು 10 ವರ್ಷ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ವರಿಗೆ ಭಾರೀ ಕೈಗಾರಿಕೆ ನೆಚ್ಚಿನ ಖಾತೆ. ಇದೇ ಖಾತೆಯಲ್ಲಿ 10 ವರ್ಷಗಳ ಸುದೀರ್ಘ‌ ಅನುಭವ ಇರುವ ಹಿನ್ನೆಲೆಯಲ್ಲಿ ಹಲವು ಬಾರಿ ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited