Untitled Document
Sign Up | Login    
Dynamic website and Portals
  
August 1, 2015

ಭಾರತ ಐಸಿಸ್ ಉಗ್ರರ ಜೊತೆ ವ್ಯವಹಾರ ಮಾಡುತ್ತಿದೆಯಾ? : ಮನೀಷ ತಿವಾರಿ

ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ

ನವದೆಹಲಿ : ಭಾರತ ಐಸಿಸ್ ಉಗ್ರರ ಜೊತೆ ಲಿಬಿಯಾದಲ್ಲಿ ವ್ಯವಹಾರ ಮಾಡುತ್ತಿದೆಯಾ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಶನಿವಾರ ಪ್ರಶ್ನಿಸಿದ್ದಾರೆ.

ಲಿಬಿಯಾದಲ್ಲಿ ಬಿಡುಗಡೆಗೊಂಡ ಇಬ್ಬರು ಭಾರತೀಯರ ಬಗ್ಗೆ ಶನಿವಾರ ಬೆಳಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಲಿಬಿಯಾದಲ್ಲಿ ನಾಲ್ವರನ್ನು ಅಪಹರಿಸಲಾಗಿದೆ -ಲಕ್ಷ್ಮೀಕಾಂತ್ ಮತ್ತು ವಿಜಯ್ ಕುಮಾರ್ ಅವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ನನಗೆ ಸಂತೋಷವಾಗಿದೆ. ಉಳಿದಿಬ್ಬರಿಗಾಗಿ ಪ್ರಯತ್ನ ನಡೆಯುತ್ತಿದೆ, ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮನೀಷ್ ತಿವಾರಿ, ಲಿಬಿಯಾದ ಸಿರ್ಟೆಯಲ್ಲಿ ಅಪಹರಣಗೊಂಡಿದ್ದ ಇಬ್ಬರು (ಕನ್ನಡಿಗರು) ಭಾರತೀಯರನ್ನು ಬಿಡುಗಡೆಗೊಳಿಸಿರುವುದು ಸಂತಸದ ವಿಚಾರ. ಉಳಿದಿಬ್ಬರ ಸುರಕ್ಷಿತ ಬಿಡುಗಡೆಗಾಗಿ ಪ್ರಾರ್ಥಿಸೋಣ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಐಸಿಸ್ ಉಗ್ರರ ಬಿಡುಗಡೆ ಮಾಡಿರುವ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಭಾರತ ಐಸಿಸ್ ಉಗ್ರರ ಜೊತೆ ಲಿಬಿಯಾದಲ್ಲಿ ವ್ಯವಹಾರ ಮಾಡಿತ್ತಿದೆಯಾ ಎಂದು ಟ್ವೀಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

ನಮ್ಮ ವಿದೇಶಾಂಗ ಸಚಿವರು ಲಿಬಿಯಾಐಸಿಸ್‌ ಜತೆ ನೇರ ಸಂಪರ್ಕದ ಹಾಟ್‌ಲೈನ್‌ ನಲ್ಲಿರುವಂತೆ ಇರುವುದರಿಂದ ಕೇಳುತ್ತಿದ್ದೇನೆ, ಲಿಬಿಯಾದಲ್ಲಿ ನಾಪತ್ತೆಯಾದ ಪಂಜಾಬ್‌ ಮೂಲದ 57 ಜನರ ಕತೆ ಏನಾಯಿತು? ಅವರು ಜೀವಂತವಿದ್ದಾರಾ? ಮೃತರಾಗಿದ್ಧಾರಾ? ವಿದೇಶಾಂಗ ಸಚಿವರೇ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿವಾರಿ ಕಟುವಾಗಿ ಪ್ರಶ್ನಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited