ನವದೆಹಲಿ : ಲಿಬಿಯಾದಲ್ಲಿ ನಾಲ್ವರು ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಶುಕ್ರವಾರ ಮಾಧ್ಯಮಕ್ಕೆ ತಿಳಿಸಿದರು.
ಅಪಹರಣಕ್ಕೆ ಒಳಗಾದವರಲ್ಲಿ ಮೂವರು ಸಿರಟೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದು ಒಬ್ಬರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಅಪಹರಣಕ್ಕೆ ಒಳಗಾದ ನಾಲ್ವರು ಭಾರತೀಯರಲ್ಲಿ ಇಬ್ಬರು ಕರ್ನಾಟಕದವರು ಮತ್ತು ಇಬ್ಬರು ಆಂದ್ರಪ್ರದೇಶದವರು ಎಂದು ಸ್ವರೂಪ್ ತಿಳಿಸಿದ್ದಾರೆ.
ಅಪಹೃತ ಕುಟುಂಬದವರೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ, ಅಪಹೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಘಟನೆಯ ವಿವರ ನೀಡಿದ್ದಾರೆ.
ಈ ಅಪಹರಣದ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ವರ್ಷವೇ ಭಾರತ ಸರ್ಕಾರ ಭಾರತೀಯರಿಗೆ ಲಿಬಿಯಾ ಬಿಡುವಂತೆ ಸಲಹೆ ನೀಡಿತ್ತು.