Untitled Document
Sign Up | Login    
Dynamic website and Portals
  
July 12, 2015

ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್

ಬೆಂಗಳೂರು : ಇಸ್ರೋದ ವಾಣಿಜ್ಯ ಉಡಾವಣಾ ಸಾಮರ್ಥ್ಯ ರುಜುವಾತಾದ ಎರಡು ದಿನದ ನಂತರ ಭಾನುವಾರ ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.

ವೆಬ್‌ಸೈಟ್ ನ ಮುಖಪುಟ ಮಾತ್ರ ವಿರೂಪಗೊಂಡಿದ್ದು, ಉಳಿದ ಪುಟಗಳು ಹಾಗೇ ಇದ್ದವು. ಹ್ಯಾಕದ ಮುಖಪುಟ ಸುಮಾರು 10 ನಿಮಿಷಗಳ ಕಾಲ ಆನ್ ಲೈನ್ ನಲ್ಲಿ ಇದ್ದು, ಸಂಜೆಯ ಹೊತ್ತಿಗೆ ಸರಿಪಡಿಸಲಾಯಿತು.

ಈ ವಿಷಯವಾಗಿ ಮಾತನಾಡಿದ ಇಸ್ರೋ ಅಧಿಕಾರಿಗಳು, ಮುಖಪುಟ ವಿರೂಪಗೊಂಡಿದ್ದು ಸತ್ಯ, ಆದರೆ ಯಾವುದೇ ಭದ್ರತೆಯ ಉಲ್ಲಂಘನೆಯಾಗಿಲ್ಲ, ಇದನ್ನು ಆಂಟ್ರಿಕ್ಸ್‌ ಉನ್ನತಾಧಿಕಾರಿಗಳಿಗೆ ತಿಳಿಸಿದ್ದೇವೆ, ಅವರು ವಿಷಯವನ್ನು ವಿಚಾರಣೆ ಮಾಡಿ, ಇದರ ಹಿಂದೆ ಯಾರ ಕೈವಾಡವಿದೆ ಎಂದು ಕಂಡು ಹಿಡಿಯಲಿದ್ದಾರೆ ಎಂದು ಹೇಳಿದರು. ಇದರ ಹಿಂದೆ ಚೀನಾ ಹ್ಯಾಕರ್ ಗಳ ಕೈವಾಡವಿದೆ ಎಂದು ಶಂಕಿಸಲಾಗಿದ್ದರೂ, ಇಸ್ರೋ ಅಧಿಕಾರಿಗಳು ಈ ವಿಷಯವನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ.

ಶುಕ್ರವಾರ ಪಿಎಸ್​ಎಲ್​ವಿ ಸಿ-28 ಉಡಾವಣಾ ವಾಹನವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಭಾರದ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಒಟ್ಟು 1,440 ಕೆ.ಜಿ. ಭಾರದ 5 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಜುಲೈ 10 ರಂದು ಉಡಾವಣೆ ಮಾಡಿ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿತ್ತು. ಇದೊಂದು ವಾಣಿಜ್ಯ ಉಡಾವಣೆಯಾಗಿದ್ದು, ಇಸ್ರೋ ಮತ್ತು ಅದರ ವಾಣಿಜ್ಯ ಸಹಯೋಗಿ ಸಂಸ್ಥೆಯಾದ ಆಂಟ್ರಿಕ್ಸ್ ಜಂಟಿಯಾಗಿ ಉಡಾವಣೆ ಕಾರ್ಯ ನಿರ್ವಹಿಸಿದ್ದವು.

 

 

Share this page : 
 

Table 'bangalorewaves.bv_news_comments' doesn't exist