Untitled Document
Sign Up | Login    
Dynamic website and Portals
  
July 6, 2015

ಗ್ರೀಸ್ ಜನಮತದ ಪರಿಣಾಮ: 300 ಕ್ಕೂ ಹೆಚ್ಚು ಅಂಕ ಕುಸಿದ ಸೆನ್ಸೆಕ್ಸ್

ಅಥೆನ್ಸ್‌ : ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಗ್ರೀಸ್ ನ ಪ್ರಭಾವ ಇತರ ದೇಶಗಳ ಮೇಲೂ ಬೀರತೊಡಗಿವೆ.

ವಿದೇಶಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಆ ಸಂಸ್ಥೆಗಳು ಹೇರುವ ಕಠಿಣ ಷರತ್ತಿಗೆ ಒಪ್ಪಿಕೊಳ್ಳದೇ ಇರುವ ನಿರ್ಧಾರವನ್ನು ಗ್ರೀಸ್‌ ಜನತೆ ಕೈಗೊಂಡಿರುವ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯ ಮೇಲಾಗಿದೆ.

ಈ ಪರಿಣಾಮ ಸೋಮವಾರದ ವಹಿವಾಟು ಪ್ರಾರಂಭದಲ್ಲೇ ಮುಂಬೈ ಸೆನ್ಸೆಕ್ಸ್ 3೦೦ ಸೂಚ್ಯಂಕ ಇಳಿಕೆ ಕಂಡಿದೆ.

ಭಾನುವಾರ ನಡೆದ ನಿರ್ಣಾಯಕ ಜನಮತದಲ್ಲಿ ಗ್ರೀಸ್ ಜನತೆ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಆ ಸಂಸ್ಥೆಗಳು ಹೇರುವ ಕಠಿಣ ಷರತ್ತಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಇದರ ಪರಿಣಾಮ ವಿಶ್ವದ ವಿವಿಧ ಷೇರುಪೇಟೆಗಳ ಮೇಲೆ ಕರಾಳ ಛಾಯೆ ಮೂಡಿಸಿದೆ.

ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಸಾಲ ನೀಡಿರುವ ವಿವಿಧ ಸಂಸ್ಥೆಗಳು ಹೇರುವ ಷರತ್ತಿಗೆ ಗ್ರೀಸ್ ಪ್ರಧಾನಿ ಅಲೆಕ್ಸಿಸ್‌ ಸಿಪ್ರಸ್‌ ಒಪ್ಪಿಗೆ ಸೂಚಿಸಿರಲಿಲ್ಲ. ಆದ್ದರಿಂದ ಜನತೆಯ ಅಭಿಪ್ರಾಯ ಕೇಳಲು ಭಾನುವಾರ ಮತದಾನ ನಡೆಸಿದ್ದರು. ಜನರೂ ಸಹ ಇದಕ್ಕೆ ಒಪ್ಪಿಗೆ ಸೂಚಿಸದೇ ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಈ ಮೂಲಕ ಸಾಲ ಮರುಪಾವತಿ ಸಂಬಂಧ ಗ್ರೀಸ್ ಗೆ ವಿದೇಶಿ ಹಣಕಾಸು ಸಂಸ್ಥೆಗಳೊಂದಿಗೆ ಜೌಕಾಸಿ ನಡೆಸುವ ಅವಕಾಶ ಲಭ್ಯವಾಗಬಹುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited